Publish Date: Tue, 12 Apr 2022 (17:18 IST)
Updated Date: Tue, 12 Apr 2022 (17:20 IST)
ಕೊಲೊಂಬೋ: ದೇಶದಲ್ಲಿ ತಾಂಡವವಾಡುತ್ತಿರುವ ಆರ್ಥಿಕ ಸಂಕಷ್ಟದ ವಿರುದ್ಧ ಪ್ರತಿಭಟನೆ ನಡೆಸಲು ಲಂಕಾ ಕ್ರಿಕೆಟಿಗರು ಒಂದು ವಾರ ಕಾಲ ಐಪಿಎಲ್ ಬಿಟ್ಟು ಬರಲಿ ಎಂದು ಲಂಕಾ ಮಾಜಿ ನಾಯಕ ಅರ್ಜುನ್ ರಣತುಂಗಾ ಆಗ್ರಹಿಸಿದ್ದಾರೆ.
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನಜೀವನ ಕಷ್ಟವಾಗಿದೆ. ಜನ ಸರ್ಕಾರದ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಕ್ರಿಕೆಟಿಗರು ಐಪಿಎಲ್ ಆಡಿಕೊಂಡು ಆರಾಮವಾಗಿರುವುದಕ್ಕೆ ಅರ್ಜುನ್ ರಣತುಂಗಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.