Publish Date: Tue, 12 Apr 2022 (09:20 IST)
Updated Date: Tue, 12 Apr 2022 (09:41 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಸ್ಪರ ಸೆಣಸಾಡಲಿವೆ.
ಚೆನ್ನೈ ಈ ಕೂಟದಲ್ಲಿ ಒಂದೇ ಒಂದು ಗೆಲುವು ಕಾಣದೇ ಹೀನಾಯ ಸ್ಥಿತಿಯಲ್ಲಿದೆ. ರವೀಂದ್ರ ಜಡೇಜಾ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಚೆನ್ನೈ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಅತ್ತ ಆರ್ ಸಿಬಿ ಸತತ ಮೂರು ಗೆಲುವಿನೊಂದಿಗೆ ಉತ್ಸಾಹದಲ್ಲಿದೆ. ಫಾ ಡು ಪ್ಲೆಸಿಸ್ ನಾಯಕತ್ವದಲ್ಲಿ ತಂಡ ಸಮತೋಲನದಿಂದ ಕೂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚೆನ್ನೈಗೆ ಹೋಲಿಸಿದರೆ ಆರ್ ಸಿಬಿ ಮೇಲುಗೈ ಹೊಂದಿದೆ. ಹೀಗಾಗಿ ಮತ್ತೊಂದು ಗೆಲುವಿನ ನಿರೀಕ್ಷೆಯಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.