Publish Date: Tue, 12 Apr 2022 (09:00 IST)
Updated Date: Tue, 12 Apr 2022 (09:30 IST)
ಮುಂಬೈ: ಐಪಿಎಲ್ 2022 ರಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟನ್ಸ್ ಕೋಚ್ ಆಶಿಷ್ ನೆಹ್ರಾ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಸಾಮಾನ್ಯವಾಗಿ ಆಧುನಿಕ ಕಾಲದಲ್ಲಿ ಕೋಚ್ ಗಳು ಲ್ಯಾಪ್ ಟಾಪ್ ಇಟ್ಟುಕೊಂಡು ಎದುರಾಳಿಗಳ ಹೆಜ್ಜೆಗಳನ್ನು ವಿಮರ್ಶಿಸುವುದು ಸಾಮಾನ್ಯ.
ಆದರೆ ನೆಹ್ರಾ ಮಾತ್ರ ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗದೇ ಸ್ವ ಅನುಭವದಿಂದ ಪೆನ್ನು ಪೇಪರ್ ಇಟ್ಟುಕೊಂಡು ಹಳೆಯ ಶೈಲಿಯಲ್ಲೇ ಕೋಚಿಂಗ್ ಮಾಡುವಾಗ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಯಶಸ್ಸಿಗೆ ನೆಹ್ರಾ ಕೊಡುಗೆ ಅಪಾರ ಎನ್ನಲಾಗುತ್ತಿದೆ.