ಮುಂಬೈ: ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದು ನಾಯಕರಾಗಿರುವ ಫಾ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಸಿಎಸ್ ಕೆ ತಂಡದ ಭಾಗವಾಗಿದ್ದ ಫಾ ಡು ಪ್ಲೆಸಿಸ್ ರನ್ನು ಚೆನ್ನೈ ತಂಡ ಈ ಆವೃತ್ತಿಗೆ ಹರಾಜಿಗೆ ಬಿಟ್ಟುಕೊಟ್ಟಿತ್ತು. ಆದರೆ ಇದು ತಪ್ಪು ನಿರ್ಧಾರ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಜಡೇಜಾ ಕೇವಲ ಆಟದ ಬಗ್ಗೆ ಗಮನಕೇಂದ್ರೀಕರಿಸಬೇಕಿತ್ತು. ಫಾ ಡು ಪ್ಲೆಸಿಸ್ ರನ್ನು ಚೆನ್ನೈ ತಂಡದಲ್ಲೇ ಉಳಿಸಿಕೊಳ್ಳಬೇಕಿತ್ತು. ಒಂದು ವೇಳೆ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೆ ಧೋನಿ ಬಳಿಕ ಅವರೇ ನಾಯಕರಾಗಬಹುದಿತ್ತು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.