Publish Date: Mon, 11 Apr 2022 (20:29 IST)
Updated Date: Mon, 11 Apr 2022 (20:32 IST)
ಮುಂಬೈ: ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ.
ಮೊದಲ ಓವರ್ ನಲ್ಲಿ 17 ರನ್ ನೀಡಿ ಭುವಿ ಮೊದಲ ಓವರ್ ನಲ್ಲೇ ಅತೀ ಹೆಚ್ಚು ರನ್ ನೀಡಿದ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.
ವಿಪರ್ಯಾಸವೆಂದರೆ ಬ್ಯಾಟಿಗರು ಗಳಿಸಿದ್ದು ಐದೇ ರನ್. ಉಳಿದೆಲ್ಲಾ ರನ್ ಗಳು ವೈಡ್ ರೂಪದಲ್ಲಿ ಹರಿದುಬಂತು! ಭುವಿ ಯದ್ವಾತದ್ವಾ ಬೌಲಿಂಗ್ ನೋಡಿ ನಾಯಕ ಕೇನ್ ವಿಲಿಯಮ್ಸನ್ ಅಸಹಾಯಕರಾಗಿ ನಿಂತರು.