Publish Date: Wed, 13 Apr 2022 (09:16 IST)
Updated Date: Wed, 13 Apr 2022 (09:18 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ ನಲ್ಲಿ 23 ರನ್ ನೀಡಿದ್ದಲ್ಲದೆ, ಎರಡೆರಡು ಕ್ಯಾಚ್ ಬಿಟ್ಟು ಬೇಸರದಲ್ಲಿದ್ದ ಯುವ ಆಟಗಾರನನ್ನು ಧೋನಿ ಸಂತೈಸಿದ್ದಾರೆ.
ಸಿಎಸ್ ಕೆ ಯುವ ವೇಗಿ ಮುಕೇಶ್ ಚೌಧರಿ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದರು. ಆದರೆ ಫೀಲ್ಡಿಂಗ್ ವೇಳೆ ಡ್ವಾನ್ ಬ್ರಾವೋ ಬೌಲಿಂಗ್ ನಲ್ಲಿ ಸುಯಾಶ್ ಪ್ರಭುದೇಸಾಯಿ ಕ್ಯಾಚ್ ಕೈ ಬಿಟ್ಟಿದ್ದರು.
ಬಳಿಕ ದಿನೇಶ್ ಕಾರ್ತಿಕ್ ಅವರ ಕ್ಯಾಚ್ ಕೂಡಾ ಕೈ ಬಿಟ್ಟಿದ್ದರು. ಈ ಕ್ಯಾಚ್ ಕೈ ಬಿಟ್ಟ ಬಳಿಕ ಮುಕೇಶ್ ಬಳಿ ಸಾಗಿದ ಧೋನಿ ಸಂತೈಸಿದರು.