Publish Date: Wed, 13 Apr 2022 (08:40 IST)
Updated Date: Wed, 13 Apr 2022 (08:51 IST)
ಮುಂಬೈ: ಐಪಿಎಲ್ 2022 ರಲ್ಲಿ ಕೊನೆಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಗೆ ಮೊದಲ ಗೆಲುವು ಸಿಕ್ಕಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 23 ರನ್ ಗಳ ಗೆಲುವು ಸಿಕ್ಕಿದೆ. ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ರಾಬಿನ್ ಉತ್ತಪ್ಪ 88, ಶಿವಂ ದುಬೆ ಅಜೇಯ 95 ರನ್ ಸಿಡಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಪ್ರಮುಖ ಆಟಗಾರರಾದ ಫಾ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಕೈ ಹಿಡಿಯಲಿಲ್ಲ. ಮ್ಯಾಕ್ಸ್ ವೆಲ್ ಇನಿಂಗ್ಸ್ 26 ಕ್ಕೇ ಮುಕ್ತಾಯವಾಯಿತು. ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 34 ರನ್ ಗಳಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು.