Publish Date: Mon, 26 Apr 2021 (09:00 IST)
Updated Date: Mon, 26 Apr 2021 (09:01 IST)
ಮುಂಬೈ: ಐಪಿಎಲ್ 14 ರಲ್ಲಿ ಸೋಲಿಲ್ಲದ ಸರದಾರನಂತೆ ಮಣಿಯುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಸೋಲುಣಿಸಲು ಧೋನಿ ಪಡೆಯೇ ಬರಬೇಕಾಯಿತು.
ಇಷ್ಟು ದಿನ ಭರ್ಜರಿ ಜಯ ಗಳಿಸುತ್ತಿದ್ದ ಆರ್ ಸಿಬಿ ನಿನ್ನೆಯ ಪಂದ್ಯದಲ್ಲಿ ಅಷ್ಟೇ ಹೀನಾಯವಾಗಿ ಸೋತಿದೆ. ರವೀಂದ್ರ ಜಡೇಜಾ ಆಲ್ ರೌಂಡರ್ ಆಟದಿಂದ ಸಿಎಸ್ ಕೆ 69 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. 28 ಎಸೆತಗಳಲ್ಲಿ 62 ಚಚ್ಚಿದ ರವೀಂದ್ರ ಜಡೇಜಾಗೆ 50 ರನ್ ಗಳಿಸಿ ಫಾ ಡು ಪ್ಲೆಸಿಸ್ ಭರ್ಜರಿ ಸಾಥ್ ಕೊಟ್ಟರು.
ಈ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿಗೆ ಎಂದಿನಂತೆ ಆರಂಭಿಕ ದೇವದತ್ತ್ ಪಡಿಕ್ಕಲ್ ಕೇವಲ 15 ಎಸೆತಗಳಲ್ಲಿ 34 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ರನ್ ಗಳಿಸುವಲ್ಲಿ ವಿಫಲರಾಗಿದ್ದು, ಆರ್ ಸಿಬಿಗೆ ದೊಡ್ಡ ಹೊಡೆತ ನೀಡಿತು. ಇದರಿಂದಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲಷ್ಟೇ ಶಕ್ತವಾಯಿತು. ಬೌಲಿಂಗ್ ನಲ್ಲೂ ಮಿಂಚಿದ ಜಡೇಜಾ 3 ವಿಕೆಟ್ ಕಬಳಿಸಿದರು.