Select Your Language

Notifications

webdunia
webdunia
webdunia
webdunia

ಸಂಜು ಸ್ಯಾಮ್ಸನ್ ನಾಯಕತ್ವದ ಬಗ್ಗೆ ರಾಜಸ್ಥಾನ್ ತಂಡದಲ್ಲೇ ಅಸಮಾಧಾನ?

ಸಂಜು ಸ್ಯಾಮ್ಸನ್ ನಾಯಕತ್ವದ ಬಗ್ಗೆ ರಾಜಸ್ಥಾನ್ ತಂಡದಲ್ಲೇ ಅಸಮಾಧಾನ?
ಮುಂಬೈ , ಭಾನುವಾರ, 25 ಏಪ್ರಿಲ್ 2021 (10:38 IST)
ಮುಂಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ಸಂಜು ಸ್ಯಾಮ್ಸನ್ ಬಗ್ಗೆ ಅವರ ತಂಡದ ಸದಸ್ಯರಲ್ಲೇ ಒಮ್ಮತವಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.


ಸಂಜು ನಾಯಕರಾಗಿರುವುದು ಸಹ ಕ್ರಿಕೆಟಿಗರಿಗೇ ಇಷ್ಟವಾದಂತಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ‘ಅವರ ಪಾಡಿಗೆ ಅವರಿರುವ ಒಬ್ಬ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಿದ್ದು, ಬಹುಶಃ ಅವರ ತಂಡದ ಸದಸ್ಯರಿಗೇ ಇಷ್ಟವಾದಂತಿಲ್ಲ’ ಎಂದು ಸೆಹ್ವಾಗ್ ಹೇಳಿದ್ದಾರೆ.

‘ಆದರೆ ಒಬ್ಬ ನಾಯಕನಿಗೆ ಇಡೀ ತಂಡದ ಆಟಗಾರರ ಜೊತೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಕ್ಯಾಪ್ಟನ್ ಆದವರು ಸಹ ಆಟಗಾರರೊಂದಿಗೆ ಮಾತನಾಡಬೇಕು. ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು. ಬಹುಶಃ ಅದಕ್ಕೆ ಕೊಂಚ ಸಮಯ ಕೊಡಬೇಕು’ ಎಂದು ಸೆಹ್ವಾಗ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಕ್ರಿಕೆಟಿಗರ ಕಾಂಪೈನ್