Publish Date: Sun, 25 Apr 2021 (09:31 IST)
Updated Date: Sun, 25 Apr 2021 (09:34 IST)
ಮುಂಬೈ: ಐಪಿಎಲ್ 14 ರಲ್ಲಿ ಇಂದು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಡುವೆ ಪಂದ್ಯ ನಡೆಯಲಿದೆ.
ಸಂಡೇ ಧಮಾಕಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಆರ್ ಸಿಬಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಿಗೆ ಹಬ್ಬವೇ ಆಗಲಿದೆ. ಚೆನ್ನೈ ಈಗಷ್ಟೇ ಗೆಲುವಿನ ಹಳಿಗೆ ಮರಳುತ್ತಿದ್ದರೆ, ಅತ್ತ ಆರ್ ಸಿಬಿ ಇದುವರೆಗೆ ಸೋಲರಿಯದ ಸರದಾರನಾಗಿ ಮೆರೆಯುತ್ತಿದೆ.
ಇವೆರಡೂ ದಿಗ್ಗಜ ನಾಯಕರು ಪರಸ್ಪರ ಮುಖಾಮುಖಿಯಾಗುತ್ತಿರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಧೋನಿ ಬ್ಯಾಟ್ ನಿಂದ ರನ್ ಹರಿದುಬಂದಿಲ್ಲ ಎನ್ನುವುದೇ ಅಭಿಮಾನಿಗಳಿಗೆ ಬೇಸರ. ಆದರೆ ಇಂದು ಆ ಬರ ನೀಗಬಹುದು ಎಂಬ ನಿರೀಕ್ಷೆಯಿದೆ. ಇಂದಿನ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.