ಚೆನ್ನೈ: ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಸಿಟ್ಟಿಗೆದ್ದ ಘಟನೆ ನಡೆದಿದೆ.
ರೋಹಿತ್ ಶರ್ಮಾ ಹೊಡೆದ ಬಾಲ್ ವಿಕೆಟ್ ಕೀಪರ್ ಕೈ ಸೇರಿದಾಗ ಅಂಪಾಯರ್ ಔಟ್ ತೀರ್ಪು ನೀಡಿದರು. ಆದರೆ ರೋಹಿತ್ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು.
ರಿಪ್ಲೇನಲ್ಲಿ ಚೆಂಡು ರೋಹಿತ್ ಶರ್ಟ್ ಗೆ ಸವರಿ ಕೀಪರ್ ಕೈ ಸೇರಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ರೋಹಿತ್ ಬಚಾವ್ ಆದರು. ಆದರೆ ಈ ವೇಳೆ ಅಂಪಾಯರ್ ಶಂಸುದ್ದೀನ್ ಕಡೆಗೆ ಕೈ ತೋರಿಸಿ ತಮ್ಮ ಸಹ ಆಟಗಾರ ಕ್ವಿಂಟನ್ ಡಿ ಕಾಕ್ ಬಳಿ ತೆರಳಿ ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.