Select Your Language

Notifications

webdunia
webdunia
webdunia
webdunia

ಐಪಿಎಲ್ 14: ಮುಂಬೈ ಮಣ್ಣು ಮುಕ್ಕಿಸಿದ ಕಿಂಗ್ಸ್ ಪಂಜಾಬ್

ಐಪಿಎಲ್ 14: ಮುಂಬೈ ಮಣ್ಣು ಮುಕ್ಕಿಸಿದ ಕಿಂಗ್ಸ್ ಪಂಜಾಬ್
ಮುಂಬೈ , ಶನಿವಾರ, 24 ಏಪ್ರಿಲ್ 2021 (09:07 IST)
ಮುಂಬೈ: ಐಪಿಎಲ್ 14 ರಲ್ಲಿ ಪ್ರಬಲ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ 9  ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
Photo Courtesy: Google


ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರೋಹಿತ್ ಶರ್ಮಾ ಮತ್ತೊಂದು ಭರ್ಜರಿ ಪರ್ಫಾರ್ಮೆನ್ಸ್ ನೀಡಿ 52 ಎಸೆತಗಳಲ್ಲಿ 63 ರನ್ ಗಳಿಸಿದರು.  ಸೂರ್ಯಕುಮಾರ್ ಯಾದವ್ 33 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ್ದ ಪಂಜಾಬ್ ಗೆ ನಾಯಕ ಕೆಎಲ್ ರಾಹುಲ್ 60 ರನ್ ಗಳಿಸಿ ಆಸರೆಯಾದರು. ಅಜೇಯ 43 ರನ್ ಗಳಿಸಿದ ಕ್ರಿಸ್ ಗೇಲ್ ತಕ್ಕ ಸಾಥ್ ನೀಡಿದರು. ಇದರೊಂದಿಗೆ ಪಂಜಾಬ್ 17.4 ಓವರ್ ಗಳಲ್ಲಿಯೇ 1 ವಿಕೆಟ್ ನಷ್ಟಕ್ಕೆ 132 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.

Share this Story:

Follow Webdunia kannada

ಮುಂದಿನ ಸುದ್ದಿ

ದೇವದತ್ತ್ ಪಡಿಕ್ಕಲ್ ಫ್ಯೂಚರ್ ಸ್ಟಾರ್ ಎಂದು ಹೊಗಳಿದ ಕೊಹ್ಲಿ