Publish Date: Fri, 23 Apr 2021 (09:13 IST)
Updated Date: Fri, 23 Apr 2021 (09:14 IST)
ಮುಂಬೈ: ಐಪಿಎಲ್ 14 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.
ಕನ್ನಡಿಗ ಆರಂಭಿಕ ದೇವದತ್ತ್ ಪಡಿಕ್ಕಲರ್ ಶತಕದ ಅಬ್ಬರದ ಬ್ಯಾಟಿಂಗ್ ಗೆ ಎದುರಾಳಿಗಳನ್ನು ನಿರುತ್ತರರಾದರು. ಪಡಿಕ್ಕಲ್ 52 ಎಸೆತಗಳಲ್ಲಿ ಭರ್ಜರಿ 101 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ನಾಯಕ ಕೊಹ್ಲಿ 72 ರನ್ ಗಳಿಸಿ ಅಜೇಯರಾಗುಳಿದರು. ಇದರಿಂದಾಗಿ ಆರ್ ಸಿಬಿ ಗೆಲುವಿಗೆ ಬೇಕಾಗಿದ್ದ 178 ರನ್ ಗಳ ಗುರಿಯನ್ನು 16.3 ಓವರ್ ಗಳಲ್ಲಿಯೇ ವಿಕೆಟ್ ನಷ್ಟವಿಲ್ಲದೇ ತಲುಪಿತು. ಅಂತಿಮವಾಗಿ ಆರ್ ಸಿಬಿ 181 ರನ್ ಗಳಿಸಿತು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಶಿವಂ ದುಬೆ 46, ರಾಹುಲ್ ತೆವಾತಿಯಾ 40 ರನ್ ಗಳಿಸಿದರು.