Publish Date: Thu, 22 Apr 2021 (09:58 IST)
Updated Date: Thu, 22 Apr 2021 (09:59 IST)
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಪಂದ್ಯಕ್ಕೆ ಮೊದಲು ತಮ್ಮ ಸಹ ಆಟಗಾರರಿಗೆ ಆಲ್ ದಿ ಬೆಸ್ಟ್ ಎಂದು ಶುಭ ಕೋರಲ್ವಂತೆ. ಇದಕ್ಕೆ ಕಾರಣವೇನೆಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ಬಹಿರಂಗಪಡಿಸಿದ್ದಾರೆ.
ಧೋನಿ ಪಂದ್ಯಕ್ಕೆ ಮೊದಲು ಯಾವತ್ತೂ ಸಹ ಆಟಗಾರರಿಗೆ ವಿಶ್ ಮಾಡಲ್ಲ. ಅವರು ಯಾವತ್ತಾದರೂ ಸಹ ಆಟಗಾರರಿಗೆ ಆಲ್ ದಿ ಬೆಸ್ಟ್, ಗುಡ್ ಲಕ್ ಎಂದು ವಿಶ್ ಮಾಡಿದರೆ ಅವರಿಗೆ ಒಳ್ಳೆಯದಾಗುವ ಬದಲು ದುರಾದೃಷ್ಟವಾಗಿಬಿಡುತ್ತದೆ ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಪಂದ್ಯಕ್ಕೆ ಮೊದಲು ಸಹ ಆಟಗಾರರಿಗೆ ವಿಶ್ ಮಾಡಲ್ಲ ಎಂದು ಓಝಾ ಹೇಳಿದ್ದಾರೆ.
ಬಹುತೇಕ ಕ್ರಿಕೆಟಿಗರು ತಮ್ಮದೇ ಆದ ನಂಬಿಕೆಗಳನ್ನಿಟ್ಟುಕೊಂಡಿದ್ದಾರೆ. ಅದೇ ರೀತಿ ಧೋನಿಗೆ ಈ ನಂಬಿಕೆಯಿದೆಯಂತೆ. ಹೀಗಾಗಿ ಅವರು ತಮ್ಮ ಸಹ ಆಟಗಾರರಿಗೆ ವಿಶ್ ಮಾಡಲ್ವಂತೆ.
Krishnaveni K
Publish Date: Thu, 22 Apr 2021 (09:58 IST)
Updated Date: Thu, 22 Apr 2021 (09:59 IST)