Publish Date: Fri, 26 Mar 2021 (09:58 IST)
Updated Date: Fri, 26 Mar 2021 (09:59 IST)
ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲಿದೆ. ಈ ಜೆರ್ಸಿಗೆ ಅದರದ್ದೇ ಆದ ವಿಶೇಷತೆಯೂ ಇದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್ ಕೆ ತಂಡದ ಸಮವಸ್ತ್ರದಲ್ಲಿ ಸೇನೆಗೆ ಗೌರವ ಸೂಚಿಸಲಾಗಿದೆ. ಅಲ್ಲದೆ, ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಜೆರ್ಸಿಯನ್ನು ಬಳಸಿ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ತಯಾರಿಸಲಾಗಿದೆ.
ಒಂದು ಜೆರ್ಸಿ ತಯಾರಿಸಲು 15 ಬಾಟಲಿಗಳನ್ನು ಬಳಸಲಾಗಿದೆ. ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಸಾಮರ್ಥ್ಯವೂ ಇದೆ. ಇದರ ಮೂಲಕ ಪರಿಸರ ಕಾಳಜಿಯನ್ನು ಸಾರುವುದು ಇದರ ಉದ್ದೇಶವಾಗಿದೆ. ಜೊತೆಗೆ ಸೇನೆಗೆ ಗೌರವ ಸೂಚಿಸಲು ಸೇನೆಯ ಸಮವಸ್ತ್ರದ ಬಣ್ಣವನ್ನು ನೀಡಲಾಗಿದೆ.