Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸ್ಟ್ರಾಂಗ್ ಆಗಿ ಬರ್ತೀನಿ: ಅಭಿಮಾನಿಗಳಿಗೆ ಭರವಸೆ ನೀಡಿದ ಶ್ರೇಯಸ್ ಐಯರ್

webdunia
ಶುಕ್ರವಾರ, 26 ಮಾರ್ಚ್ 2021 (09:34 IST)
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭುಜಕ್ಕೆ ಪೆಟ್ಟುಮಾಡಿಕೊಂಡು ಸರಣಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಐಯರ್ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.


ಶ್ರೇಯಸ್ ಐಯರ್ ಇದೀಗ ಐಪಿಎಲ್ ನ ಪಂದ್ಯಗಳನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಎರಡು ತಿಂಗಳ ಕಾಲ ಕ್ರಿಕೆಟ್ ನಿಂದ ದೂರವಿರಬೇಕಾಗುತ್ತದೆ. ಇದು ಅವರ ಐಪಿಎಲ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಶ್ರೇಯಸ್ ಐಯರ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರು ಯಾರಾಗ್ತಾರೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಇದರ ಬೆನ್ನಲ್ಲೇ ಶ್ರೇಯಸ್ ಐಯರ್ ಅಭಿಮಾನಿಗಳಿಗೆ ಭರವಸೆಯ ಮಾತನಾಡಿದ್ದು, ‘ನಿಮ್ಮೆಲ್ಲಾ ಸಂದೇಶಗಳನ್ನು ಓದುತ್ತಿರುತ್ತೇನೆ. ನಿಮ್ಮೆಲ್ಲರ ಹಾರೈಕೆ ನೋಡಿ ಹೃದಯ ತುಂಬಿಬಂದಿದೆ. ನನ್ನ ಹೃದಯಾಳದಿಂದ ಧನ್ಯವಾದಗಳು. ಎಷ್ಟು ಹಿನ್ನಡೆ ಅನುಭವಿಸುತ್ತೀರೋ ಅಷ್ಟೇ ಶಕ್ತರಾಗಿ ವಾಪಸ್ ಬರಲು ಸಾಧ್ಯವಾಗುತ್ತದಂತೆ. ಹಾಗೇ ನಾನೂ ಕಮ್ ಬ್ಯಾಕ್ ಮಾಡುವೆ’ ಎಂದು ಟ್ವೀಟ್ ಮಾಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ಈ ಬಾರಿ ಇವರೇ ಓಪನರ್ಸ್: ಕನ್ ಫರ್ಮ್ ಮಾಡಿದ ಕೋಚ್