Publish Date: Fri, 22 Mar 2019 (09:02 IST)
Updated Date: Fri, 22 Mar 2019 (09:05 IST)
ನವದೆಹಲಿ: ಮೊನ್ನೆಯಷ್ಟೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಂತರಿಕ ಅಭ್ಯಾಸ ಪಂದ್ಯವಾಡಿದಾಗ ಚೆನ್ನೈ ಮೈದಾನದಲ್ಲಿ 12 ಸಾವಿರ ಅಭಿಮಾನಿಗಳು ಸೇರಿದ್ದು ಭಾರೀ ಸುದ್ದಿಯಾಗಿತ್ತು.
ಈ ರೀತಿ ತಂಡದೊಳಗೇ ಅಭ್ಯಾಸ ಪಂದ್ಯಗಳನ್ನು ಆಯೋಜಿಸುವುದು ಸಾಮಾನ್ಯ ಸಂಗತಿ. ಆದರೆ ಚೆನ್ನೈ ಅಭಿಮಾನಿಗಳು ಧೋನಿ ಸೇರಿದಂತೆ ತಮ್ಮ ಸಿಎಸ್ ಕೆ ತಂಡದ ಮೆಚ್ಚಿನ ಆಟಗಾರರ ಅಭ್ಯಾಸ ನೋಡಲು ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ್ದು ಭಾರೀ ಸುದ್ದಿಯಾಗಿತ್ತು.
ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ ಎರಡು ಅಭ್ಯಾಸ ಪಂದ್ಯ ಆಡಿದೆ. ಆದರೆ ಡೆಲ್ಲಿ ಅಭಿಮಾನಿಗಳಿಗೆ ಈ ಅಭ್ಯಾಸ ಪಂದ್ಯ ನೋಡಲು ಅವಕಾಶ ನೀಡಲಾಗಿಲ್ಲ. ಕಾರಣ ಭದ್ರತೆ! ತಮ್ಮ ನೆಚ್ಚಿನ ತಾರೆಯನ್ನು ನೋಡಲು ಬಂದ ಅಭಿಮಾನಿಗಳು ಮೈದಾನದ ಹೊರಗೇ ಕಾಯುವಂತಹ ಪರಿಸ್ಥಿತಿ ಎದುರಾಯಿತು. ಭದ್ರತಾ ಕಾರಣಗಳಿಂದ ಅಭಿಮಾನಿಗಳನ್ನು ಒಳಗೆ ಬಿಡದೇ ಇದ್ದಿದ್ದು, ಡೆಲ್ಲಿ ತಂಡಕ್ಕೂ, ಅಭಿಮಾನಿಗಳಿಗೂ ನಿರಾಶೆ ಉಂಟುಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ