Publish Date: Thu, 21 Mar 2019 (09:16 IST)
Updated Date: Thu, 21 Mar 2019 (09:18 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಏಳೆಂಟು ವರ್ಷವಾದರೂ ಏನೂ ಕಡಿದು ಗುಡ್ಡೆ ಹಾಕಿಲ್ಲ ಎಂದು ವಿರಾಟ್ ಕೊಹ್ಲಿ ಬಗ್ಗೆ ಗೌತಮ್ ಗಂಭೀರ್ ಟೀಕಿಸಿದ ಬೆನ್ನಲ್ಲೇ ಇದೀಗ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಮೂಡಿದೆ.
ಈ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ಬಳಿ ಸಂದರ್ಶನವೊಂದರಲ್ಲಿ ಕೇಳಿದ್ದಕ್ಕೆ ಅವರು ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕರಾಗಿ ಹೇಗಿದ್ದಾರೆ ಎಂಬುದನ್ನು ವಿಶ್ಲೇಷಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನೂ ಆಗಿರುವ ಗಂಗೂಲಿ ಕೊಹ್ಲಿ ಆರ್ ಸಿಬಿ ನಾಯಕರಾಗಿ ಏನು ಮಾಡಿದ್ದಾರೆ ಎಂಬುದಕ್ಕಿಂತ ಒಬ್ಬ ಆಟಗಾರನಾಗಿ ಅವರು ಏನು ಮಾಡಿದ್ದಾರೆ ನೋಡಿ. ಕೊಹ್ಲಿ ನಿಜವಾಗಿ ಚಾಂಪಿಯನ್. ಆರ್ ಸಿಬಿ ಅವರನ್ನು ನಾಯಕರಾಗಿ ಪಡೆದಿರುವುದು ಅದೃಷ್ಟ ಎಂದು ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ