Select Your Language

Notifications

webdunia
webdunia
webdunia
webdunia

ಧೋನಿ ಇದ್ದರೆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಏನಾಗುತ್ತದೆ ಎಂದು ಬಹಿರಂಗಪಡಿಸಿದ ಮಾಜಿ ಕೋಚ್ ಅನಿಲ್ ಕುಂಬ್ಳೆ

ಧೋನಿ ಇದ್ದರೆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಏನಾಗುತ್ತದೆ ಎಂದು ಬಹಿರಂಗಪಡಿಸಿದ ಮಾಜಿ ಕೋಚ್ ಅನಿಲ್ ಕುಂಬ್ಳೆ
ಮುಂಬೈ , ಬುಧವಾರ, 20 ಮಾರ್ಚ್ 2019 (09:04 IST)
ಮುಂಬೈ: ಧೋನಿ ಕಳೆದ ಕೆಲವು ಸಮಯಗಳಿಂದ ಬ್ಯಾಟಿಂಗ್ ನಲ್ಲಿ ಹೆಚ್ಚು ರನ್ ಗಳಿಸಿರಲಿಕ್ಕಿಲ್ಲ. ಆದರೆ ಅವರು ಈಗಲೂ ತಂಡದ ಅನಧಿಕೃತ ಕ್ಯಾಪ್ಟನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.


ತಂಡದ ನಿರ್ಧಾರಗಳಲ್ಲಿ, ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಧೋನಿ ಸಲಹೆ ವಿರಾಟ್ ಕೊಹ್ಲಿಗೆ ಮುಖ್ಯವಾಗುತ್ತದೆ. ಹೀಗಾಗಿ ಧೋನಿ ತಂಡದಲ್ಲಿ ಇದ್ದರೇ ಕೊಹ್ಲಿ ನಾಯಕನಾಗಿ ಹೆಚ್ಚು ಕಂಫರ್ಟೇಬಲ್‍ ಆಗಿರುತ್ತಾರೆ ಎಂದು ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ನಾಯಕತ್ವ ಎನ್ನುವುದು ಧೋನಿಗೆ ನೈಸರ್ಗಿಕವಾಗಿ ಬಂದಿದೆ. ಧೋನಿ ವಿಕೆಟ್ ಹಿಂದುಗಡೆ ನಿಂತು ಕೊಹ್ಲಿಗೆ ಕೊಡುವ ಸಲಹೆಗಳು ತಂಡಕ್ಕೆ ತುಂಬಾ ಉಪಯುಕ್ತವಾಗುತ್ತದೆ. ಇದು ಕೊಹ್ಲಿಯನ್ನು ನಾಯಕನಾಗಿ ಮತ್ತಷ್ಟು ಬೆಳೆಸುವುದಲ್ಲದೆ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನಿಲ್ ಕುಂಬ್ಳೆ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್..ಟಿಕೆಟ್...! ವಿಶ್ವಕಪ್ ಕ್ರಿಕೆಟ್ ಗೆ ಟಿಕೆಟ್ ಮಾರಾಟ ಶುರು