Publish Date: Mon, 18 Mar 2019 (09:43 IST)
Updated Date: Mon, 18 Mar 2019 (09:44 IST)
ನವದೆಹಲಿ: ಟೀಂ ಇಂಡಿಯಾ ನಾಯಕರಾಗಿದ್ದಾಗ ಧೋನಿ ಹಲವು ಬಾರಿ ತಮ್ಮನ್ನು ತಂಡದಿಂದ ಕೈ ಬಿಡದಂತೆ ರಕ್ಷಿಸಿದ್ದರು ಎಂದು ಹಿರಿಯ ವೇಗಿ ಇಶಾಂತ್ ಶರ್ಮಾ ಹೇಳಿಕೊಂಡಿದ್ದಾರೆ.
ಇಶಾಂತ್ ಶರ್ಮಾ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಲು ಕೆಲವೊಮ್ಮೆ ವಿಫಲರಾಗುತ್ತಿದ್ದರು. ಹಾಗಿದ್ದರೂ ತನ್ನಲ್ಲಿರುವ ಪ್ರತಿಭೆ ಗುರುತಿಸಿ ತಾನು ತಂಡದಿಂದ ಹೊರಹೋಗದಂತೆ ಹಲವು ಬಾರಿ ಧೋನಿ ರಕ್ಷಿಸಿದ್ದರು ಎಂದು ಇಶಾಂತ್ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.
ಈಗ ವಿರಾಟ್ ಕೊಹ್ಲಿ ಕೂಡಾ ತಂಡದ ಹಿರಿಯ ಸದಸ್ಯನಾಗಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಿಮಗೆ ಸುಸ್ತಾಗುತ್ತದೆ ಎಂದು ನನಗೆ ಗೊತ್ತು. ಆದರೂ ನೀವು ಉತ್ತಮ ಪ್ರದರ್ಶ ನೀಡಲೇಬೇಕು ಎನ್ನುತ್ತಾರೆ ಎಂದು ಕೊಹ್ಲಿ ಬಗ್ಗೆಯೂ ಇಶಾಂತ್ ಮೆಚ್ಚುಗೆಯ ಮಾತನಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ