Publish Date: Sun, 17 Mar 2019 (09:22 IST)
Updated Date: Sun, 17 Mar 2019 (09:24 IST)
ನವದೆಹಲಿ: ಇತ್ತೀಚೆಗೆ ಧೋನಿಯ ನಂತರ ಟೀಂ ಇಂಡಿಯಾದ ವಿಕೆಟ್ ಕೀಪರ್ ಎಂದು ರಿಷಬ್ ಪಂತ್ ಮೇಲೆ ಸಾಕಷ್ಟು ನಿರೀಕ್ಷೆಗಳು, ಹೋಲಿಕೆಗಳು, ಟೀಕೆಗಳು ನಡೆಯುತ್ತಲೇ ಇವೆ. ಇದರ ಬಗ್ಗೆ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ದಿಗ್ಗಜ ಧೋನಿಗೆ ಹೋಲಿಕೆ ಮಾಡಬೇಡಿ ಎಂದು ರಿಷಬ್ ಪಂತ್ ಮನವಿ ಮಾಡಿದ್ದಾರೆ. ನಾನು ಅವರಿಂದ ಸಾಕಷ್ಟು ಕಲಿಯಲು ಬಯಸುತ್ತೇನೆ ಎಂದು ಪಂತ್ ಹೇಳಿಕೊಂಡಿದ್ದಾರೆ.
‘ಒಬ್ಬ ಯುವ ಕ್ರಿಕೆಟಿಗನಾಗಿ ಅವರಿಂದ ಸಾಕಷ್ಟು ಕಲಿಯಲು ಬಯಸುವೆ. ಅವರು ದಿಗ್ಗಜ ಕ್ರಿಕೆಟಿಗ. ನಾನು ಅವರ ಜತೆ ಹೆಚ್ಚು ಮಾತನಾಡುತ್ತೇನೆ, ನನ್ನ ಆಟ ಹೇಗೆ ಸುಧಾರಿಸಬಹುದು ಎಂದು ಸಲಹೆ ಕೇಳುತ್ತೇನೆ. ಅವರ ಜತೆ ಜನ ನನ್ನನ್ನು ಹೋಲಿಕೆ ಮಾಡುವುದು ನನಗಿಷ್ಟವಿಲ್ಲ’ ಎಂದು ಪಂತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ