Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಬಿಡುವುದು ವಿರಾಟ್ ಕೊಹ್ಲಿ ಕೈಯಲ್ಲಿದೆ!

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದು ಬಿಡುವುದು ವಿರಾಟ್ ಕೊಹ್ಲಿ ಕೈಯಲ್ಲಿದೆ!
ಮುಂಬೈ , ಶನಿವಾರ, 16 ಮಾರ್ಚ್ 2019 (09:50 IST)
ಮುಂಬೈ: ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುತ್ತೋ, ಬಿಡುತ್ತೋ ಎನ್ನುವುದು ನಾಯಕ ವಿರಾಟ್ ಕೊಹ್ಲಿ ಕೈಯಲ್ಲಿದೆಯಂತೆ! ಹಾಗಂತ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.


ಕೊಹ್ಲಿ ಈ ಬಾರಿ ವಿಶ್ವಕಪ್ ನಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರೆ ಭಾರತ ವಿಶ್ವಕಪ್ ಗೆಲ್ಲುತ್ತದೆ ಎನ್ನುವ ಮೂಲಕ ಟೀಂ ಇಂಡಿಯಾ ಹಣೆಬರಹ ಕೊಹ್ಲಿ ಕೈಯಲ್ಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿಯನ್ನು ಏಕದಿನ ಪಂದ್ಯಗಳಲ್ಲಿ ಬೆಸ್ಟ್ ಬ್ಯಾಟ್ಸ್ ಮನ್ ಎಂದೂ ಪಾಂಟಿಂಗ್ ಹೊಗಳಿದ್ದಾರೆ.

ಇನ್ನು, ಈ ಬಾರಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ಸೆಮಿಫೈನಲ್ ಗೇರಲಿದೆ ಎಂದು ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಲೇಟ್ ಆಗಿ ಬರಬೇಡ! ವಿರಾಟ್ ಕೊಹ್ಲಿಗೆ ಧೋನಿ ವಾರ್ನಿಂಗ್!