ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಬಳಿಕ ಏಕದಿನ ಸರಣಿಯನ್ನೂ ಸೋತ ಬಳಿಕ ಟೀಂ ಇಂಡಿಯಾ ಆಟಗಾರರು ಮಾನಸಿಕವಾಗಿ ಕುಗ್ಗಿರಬಹುದು ಎಂದು ನೀವಂದುಕೊಂಡಿದ್ದರೆ ಸುಳ್ಳು.
									
										
								
																	
ಹಾಗಂತ ಸ್ವತಃ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಸರಣಿ ಸೋತ ಬಳಿಕವೂ ಡ್ರೆಸ್ಸಿಂಗ್ ರೂಂ ಪರಿಸ್ಥಿತಿ ಚೆನ್ನಾಗಿಯೇ ಇದೆ. ನಾವು ಯಾರೂ ಸೋಲಿನಿಂದ ಭಯಪಟ್ಟಿಲ್ಲ ಎಂದು ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.
									
			
			 
 			
 
 			
			                     
							
							
			        							
								
																	‘ನಮಗೆ ಈ ಮೂರು ಪಂದ್ಯಗಳಲ್ಲಿ ಏನು ಮಾಡಬೇಕೆಂದು ಗೊತ್ತಿತ್ತು. ಅದನ್ನು ನಾವು ಮಾಡಿದ್ದೇವೆ. ಹೀಗಾಗಿ ಯಾವೊಬ್ಬ ಆಟಗಾರನೂ ಭಯದಲ್ಲಿ ಇಲ್ಲ. ಸಹಾಯಕ ಸಿಬ್ಬಂದಿಗಳೂ ಕುಗ್ಗಿಲ್ಲ. ಎದುರಾಳಿಗಳು ನಮಗಿಂತ ಚೆನ್ನಾಗಿ ಒತ್ತಡ ನಿಭಾಯಿಸಿದರು. ಹಾಗಾಗಿ ಅವರು ಅರ್ಹವಾಗಿ ಗೆದ್ದರು ಅಷ್ಟೇ’ ಎಂದು ಕೊಹ್ಲಿ ಏನೂ ಆಗಿಲ್ಲವೆಂಬಂತೆ ಅಭಿಪ್ರಾಯಪಟ್ಟಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.