ಕೆಎಲ್ ರಾಹುಲ್ ರನ್ನು ಹೊರಗಿಟ್ಟಿದ್ದಕ್ಕೆ ವಿರಾಟ್ ಕೊಹ್ಲಿ ಮೇಲೆ ಟ್ವಿಟರಿಗರ ಸಿಟ್ಟು

ಗುರುವಾರ, 14 ಮಾರ್ಚ್ 2019 (09:32 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಏಕದಿನ ಪಂದ್ಯದಿಂದ ಕೆಎಲ್ ರಾಹುಲ್ ರನ್ನು ಹೊರಗಿಟ್ಟಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಲೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕೊಹ್ಲಿಯದ್ದು ಇದೆಂಥಾ ಲೆಕ್ಕಾಚಾರ? ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಿರುವ ಕೆಎಲ್ ರಾಹುಲ್ ಗೆ ಕೇವಲ ಒಂದೇ ಪಂದ್ಯದಲ್ಲಿ ಚಾನ್ಸ್ ಕೊಡುವುದೇಕೆ? ಅವರು ನಿರಂತರವಾಗಿ ಎರಡು, ಮೂರು ಪಂದ್ಯದಲ್ಲಿ ಅವಕಾಶ ಪಡೆಯುವುದೇ ಇಲ್ಲ ಯಾಕೆ ಎಂದು ಕೊಹ್ಲಿ ಮೇಲೆ ಟ್ವಿಟರಿಗರು ಗರಂ ಆಗಿದ್ದಾರೆ.

ಕೇವಲ ಒಂದೇ ಪಂದ್ಯಕ್ಕೆ ಅವರನ್ನು ಹೊರಗಿಟ್ಟು, ವಿಜಯ್ ಶಂಕರ್ ಗೆ ಸ‍್ಥಾನ ನೀಡಿದ್ದೇಕೆ ಎಂದು ಕೆಲವರು ಪ್ರಶ್ನಿಸಿದರೆ, ರಾಹುಲ್ ಗೆ ತಂಡದಲ್ಲಿ ಆರು ತಿಂಗಳಿಗೊಮ್ಮೆ ಒಂದು ಪಂದ್ಯಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿಯ ಈ ರೀತಿಯ ಪ್ರಯೋಗಗಳೇ ಅರ್ಥವಾಗುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಐ ಮಿಸ್ ಯೂ ಸೈನಾ...! ಬ್ಯಾಡ್ಮಿಂಟನ್ ಆಡಲು ಬಂದ ಪಿ ಕಶ್ಯಪ್ ಗೆ ಪತ್ನಿಯದ್ದೇ ನೆನಪು!