ಸೋಲಿನ ಜತೆಗೆ ಟೀಂ ಇಂಡಿಯಾಗೆ ಕುಖ್ಯಾತಿಗಳ ಬರೆ

ಗುರುವಾರ, 14 ಮಾರ್ಚ್ 2019 (09:16 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂತಿಮ ಏಕದಿನದ ಜತೆಗೆ ಸರಣಿ ಸೋತ ಟೀಂ ಇಂಡಿಯಾ ಹಲವು ಬೇಡದ ದಾಖಲೆಗಳನ್ನು ಮೈಮೇಲೆಳೆದುಕೊಂಡಿದೆ.


ಕಳೆದ 28 ತಿಂಗಳ ಬಳಿಕ ಟೀಂ ಇಂಡಿಯಾವ ತವರಿನಲ್ಲಿ ಏಕದಿನ ಸರಣಿಯೊಂದನ್ನು ಸೋತಿದೆ. 2015 ರಲ್ಲಿ ದ.ಆಫ್ರಿಕಾ ವಿರುದ್ಧ 2-3 ಅಂತರದಿಂದ ಸರಣಿ ಸೋತ ಬಳಿಕ ಇದೇ ಮೊದಲ ಬಾರಿಗೆ ತವರಿನಲ್ಲಿ ಸೋತ ಅವಮಾನಕ್ಕೆ ಗುರಿಯಾಗಿದೆ.

ಇನ್ನು, ವಿರಾಟ್ ಕೊಹ್ಲಿ ನೇತೃತ್ವದಲ್ಲಿ ತವರಿನಲ್ಲಿ ಮೊದಲ ಏಕದಿನ ಸರಣಿ ಸೋಲು ಇದಾಗಿದ್ದು, ಸತತ ಮೂರು ಏಕದಿನ ಸರಣಿ ಸೋತ ಕುಖ್ಯಾತಿಗೂ ಕೊಹ್ಲಿಗೆ ಸಿಕ್ಕಿದೆ. ಅದೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಟೀಂ ಇಂಡಿಯಾ ಕಳೆದ ಬಾರಿ ಏಕದಿನ ಸೋತಿದ್ದು 2009 ರಲ್ಲಿ! ಅಷ್ಟೇ ಅಲ್ಲದೆ, 2012 ರ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಸತತವಾಗಿ ಮೂರು ಪಂದ್ಯಗಳಲ್ಲಿ ಆಲೌಟ್ ಆದ ಕುಖ್ಯಾತಿಗೆ ಒಳಗಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಲ್ಲಿ ಗಳಿಸಿದ್ದನ್ನು ಇಲ್ಲಿ ಕಳೆದುಕೊಂಡ ಕೊಹ್ಲಿ ಪಡೆ