Select Your Language

Notifications

webdunia
webdunia
webdunia
webdunia

ಅಲ್ಲಿ ಗಳಿಸಿದ್ದನ್ನು ಇಲ್ಲಿ ಕಳೆದುಕೊಂಡ ಕೊಹ್ಲಿ ಪಡೆ

ಅಲ್ಲಿ ಗಳಿಸಿದ್ದನ್ನು ಇಲ್ಲಿ ಕಳೆದುಕೊಂಡ ಕೊಹ್ಲಿ ಪಡೆ
ನವದೆಹಲಿ , ಗುರುವಾರ, 14 ಮಾರ್ಚ್ 2019 (09:03 IST)
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಅಂತಿಮ ಏಕದಿನ ಪಂದ್ಯವನ್ನು 35 ರನ್ ಗಳಿಂದ ಸೋಲುವ ಮುಖಾಂತರ ಟೀಂ ಇಂಡಿಯಾ 2-3 ಅಂತರದಿಂದ ಸರಣಿ ಸೋತು ಮುಖಭಂಗ ಅನುಭವಿಸಿದೆ.


ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್, ಏಕದಿನ ಸರಣಿ ಗೆದ್ದು ದಾಖಲೆ ಮಾಡಿದ್ದ ಟೀಂ ಇಂಡಿಯಾ ಈ ಮೂಲಕ ಅಲ್ಲಿ ಗಳಿಸಿದ್ದ ಗೌರವವನ್ನು ತವರಿನಲ್ಲಿ ಅದೇ ಆಸೀಸ್ ವಿರುದ್ಧ ಸೋತು ಕಳೆದುಕೊಂಡಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಆಸೀಸ್ ನೀಡಿದ ಮೊತ್ತವನ್ನು ಬೆನ್ನತ್ತುವಲ್ಲಿ ಆರಂಭಿದಂದಲೇ ಎಡವಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು 50 ಓವರ್ ಗಳಲ್ಲಿ 237 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.

ಭಾರತದ ಪರ ಕೊಂಚ ಪ್ರತಿರೋಧ ತೋರಿದವರು ರೋಹಿತ್ ಶರ್ಮಾ ಮಾತ್ರ. 56 ರನ್ ಗಳಿಸಿದ ರೋಹಿತ್ ಆಡಂ ಜಂಪಾ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ (44) ಮತ್ತು ಭುವನೇಶ‍್ವರ್ ಕುಮಾರ್ (46) ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಅಷ್ಟರಲ್ಲೇ ಪಂದ್ಯ ಭಾರತದ ಕೈ ಜಾರಿತ್ತು. ಮತ್ತೆ ಶಿಖರ್ ಧವನ್ ವೈಫಲ್ಯ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೊಹ್ಲಿ ಸೇರಿದಂತೆ ರಿಷಬ್ ಪಂತ್, ವಿಜಯ್ ಶಂಕರ್ ಕಳಪೆ ಬ್ಯಾಟಿಂಗ್ ಮಾಡಿದ್ದು, ಭಾರತದ ಸೋಲಿಗೆ ಕಾರಣವಾಯಿತು. ಇದರಿಂದಾಗಿ ಬರೊಬ್ಬರಿ ಎರಡೂವರೆ ವರ್ಷಗಳ ಬಳಿಕ ಭಾರತ ತವರಿನಲ್ಲಿ ಏಕದಿನ ಸರಣಿ ಸೋತ ಅವಮಾನಕ್ಕೆ ಗುರಿಯಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಗೆಲ್ಲಲು ಟೀಂ ಇಂಡಿಯಾಗೆ 273 ರನ್ ಗುರಿ