ಐ ಮಿಸ್ ಯೂ ಸೈನಾ...! ಬ್ಯಾಡ್ಮಿಂಟನ್ ಆಡಲು ಬಂದ ಪಿ ಕಶ್ಯಪ್ ಗೆ ಪತ್ನಿಯದ್ದೇ ನೆನಪು!

ಗುರುವಾರ, 14 ಮಾರ್ಚ್ 2019 (09:27 IST)
ನವದೆಹಲಿ: ಸ್ವಿಜರ್ ಲ್ಯಾಂಡ್ ಓಪನ್ ಬ್ಯಾಡ್ಮಿಟಂನ್ 2019 ಪಂದ್ಯಾವಳಿಯ ಪ್ರಮೋಷನಲ್ ಈವೆಂಟ್ ಗಾಗಿ ಬಂದಿಳಿದ ಭಾರತದ ಖ್ಯಾತ ಟೆನಿಸ್ ತಾರೆ ಪಾರುಪಳ್ಳಿ ಕಶ್ಯಪ್ ತಮ್ಮ ಪತ್ನಿ ಸೈನಾ ನೆಹ್ವಾಲ್ ರನ್ನು ನೆನಪು ಮಾಡಿಕೊಂಡಿದ್ದಾರೆ.


ಸ್ವಿಜರ್ ಲ್ಯಾಂಡ್ ನ ಸುಂದರ ಹಿಮಪಾತದ ತಾಣದಲ್ಲಿ ಪ್ರಮೋಷನಲ್ ಈವೆಂಟ್ ಗಾಗಿ ಸಹ ಆಟಗಾರ ಸಾಯ್ ಪ್ರಣೀತ್ ಜತೆ ಬ್ಯಾಡ್ಮಿಂಟನ್ ಆಡಿದ ಕಶ್ಯಪ್ ಬಳಿ ನಿರೂಪಕಿ ಹೇಗಿದೆ ಈ ತಾಣ ಎಂದು ಕೇಳಿದಾಗ ಕಶ್ಯಪ್ ಸೈನಾ ಜತೆಯಲ್ಲಿರಬೇಕಿತ್ತು ಎಂದಿದ್ದಾರೆ.

‘ಈ ಜಾಗ ನೋಡಿದ್ರೆ ಸಿನಿಮಾ ನೆನಪಾಗುತ್ತೆ. ತುಂಬಾ ಅದ್ಭುತವಾಗಿದೆ. ಈಗ ಸೈನಾ ನನ್ನ ಜತೆಗಿರಬೇಕಿತ್ತು. ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ದುರದೃಷ್ಟವಶಾತ್ ಅವಳಿಗೆ ಹುಷಾರಿಲ್ಲ. ಅದಕ್ಕೇ ನನ್ನ ಜತೆಗೆ ಬಂದಿಲ್ಲ. ಆದ್ರೆ ಇಲ್ಲಿನ ಫೋಟೋಗಳನ್ನು ಅವಳಿಗೆ ತೋರಿಸ್ತೇನೆ. ಅವಳು ಇಂತಹ ತಾಣಗಳನ್ನು ತುಂಬಾ ಇಷ್ಟಪಡುತ್ತಾಳೆ. ಅವಳಿದ್ದಿದ್ದರೆ ತುಂಬಾ ಎಂಜಾಯ್ ಮಾಡುತ್ತಿದ್ದಳು’ ಎಂದು ಕಶ್ಯಪ್ ಪತ್ನಿಯನ್ನು ನೆನೆಸಿಕೊಂಡು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೋಲಿನ ಜತೆಗೆ ಟೀಂ ಇಂಡಿಯಾಗೆ ಕುಖ್ಯಾತಿಗಳ ಬರೆ