Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಇಂದು ಮತ್ತೆ ಸೈನಾ ನೆಹ್ವಾಲ್ ವಿವಾಹ! ಆಹ್ವಾನಿತರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

webdunia
ಭಾನುವಾರ, 16 ಡಿಸೆಂಬರ್ 2018 (08:52 IST)
ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರಾ ಜೋಡಿ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಇಂದು ಸಂಪ್ರದಾಯ ಪ್ರಕಾರ ಹೈದರಾಬಾದ್ ನಲ್ಲಿ ಹಸೆಮಣೆ ಏರಲಿದ್ದಾರೆ.


ಮೊನ್ನೆಯಷ್ಟೇ ಈ ಜೋಡಿ ತಮ್ಮ ಆಪ್ತೇಷ್ಟರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಮದುವೆ ನೋಂದಣಿ ಮಾಡಿ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದರು. ಇದೀಗ ಸಂಪ್ರದಾಯ ಪ್ರಕಾರ ಇಬ್ಬರೂ ಮದುವೆಯಾಗಲಿದ್ದಾರೆ.

ಇಂದು ನಡೆಯಲಿರುವ ವಿವಾಹ ಸಮಾರಂಭಕ್ಕೆ ಸೈನಾ-ಕಶ್ಯಪ್ ಜೋಡಿ ಈಗಾಗಲೇ ರಾಜ್ಯಪಾಲ ಇಎಸ್ಎಲ್ ನರಸಿಂಹನ್, ನಟ ಚಿರಂಜೀವಿ, ಬ್ಯಾಡ್ಮಿಂಟನ್ ಗುರು ಗೋಪಿಚಂದ್,  ಮಾಜಿ ಕ್ರಿಕೆಟಿಗ ಚಾಮುಂಡೇಶ್ವರ್ ನಾಥ್ ಮುಂತಾದ ಗಣ್ಯರನ್ನು ಆಹ್ವಾನಿಸಿದೆ. ಅದಲ್ಲದೆ, ಈ ನವ ಜೋಡಿಯ ಸ್ನೇಹಿತರು ಹಾಗೂ ಬ್ಯಾಡ್ಮಿಂಟನ್ ತಾರೆಯರೂ ಈ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದೆ. ಹಾಗಿದ್ದರೂ ಬೇರೆ ತಾರಾ ಜೋಡಿಗಳಂತಿರದೇ ಸರಳವಾಗಿ ವಿವಾಹವಾಗಿ ಈ ಎರಡೂ ಜೋಡಿ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಕೆಎಲ್ ರಾಹುಲ್, ಮುರಳಿ ವಿಜಯ್ ಇನ್ನೂ ಟೀಂ ಇಂಡಿಯಾದಲ್ಲೇ ಯಾಕಿದ್ದಾರೆ?!