Select Your Language

Notifications

webdunia
webdunia
webdunia
webdunia

ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರು ; ಅರ್ಧಕ್ಕೆ ನಿಂತ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್

ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರು ; ಅರ್ಧಕ್ಕೆ ನಿಂತ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್
ಮುಂಬೈ , ಶುಕ್ರವಾರ, 5 ಅಕ್ಟೋಬರ್ 2018 (07:16 IST)
ಮುಂಬೈ : ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ ಇದೀಗ ಅವರು ನಟಿಸುತ್ತಿರುವ ಸೈನಾ ನೆಹ್ವಾಲ್ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆಯಂತೆ.


ಹೌದು. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಚರಿತ್ರೆ ತೆರೆ ಮೇಲೆ ಬರ್ತಿದೆ. ಈ ಚಿತ್ರದಲ್ಲಿ ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿ  ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ. ಆದರೆ ಸೆಪ್ಟೆಂಬರ್ 27 ರಿಂದ ನಟಿ ಶ್ರದ್ಧಾ ಕಪೂರ್ ಚಿತ್ರದ ಶೂಟಿಂಗ್ ಗೆ ಬಂದಿಲ್ಲವಾದ್ದರಿಂದ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದೆಯಂತೆ.


ಇದಕ್ಕೆ ಕಾರಣ ಶ್ರದ್ಧಾ ಕಪೂರ್ ಆರೋಗ್ಯದಲ್ಲಿ ಏರುಪೇರಾಗಿತ್ತಂತೆ. ಆಸ್ಪತ್ರೆಗೆ ತೋರಿಸಿದಾಗ ಡೆಂಗ್ಯು ಎಂಬುದು ಗೊತ್ತಾಗಿದೆ. ಶ್ರದ್ಧಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಇದೀಗ ಈ ವಿಷಯವನ್ನು ಚಿತ್ರದ ನಿರ್ದೇಶಕ ಭೂಷಣ್ ಕುಮಾರ್ ಸ್ಪಷ್ಟಪಡಿಸಿದ್ದು, ಶ್ರದ್ಧಾ ಡೆಂಗ್ಯುವಿನಿಂದ ಗುಣಮುಖರಾದ ನಂತರ, ಶೀಘ್ರವೇ ಚಿತ್ರೀಕರಣಕ್ಕೆ ಮರಳುತ್ತಾರೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ತನುಶ್ರೀ ದತ್ತಾಗೆ ಎದುರಾಗಿದೆ ಸಂಕಷ್ಟ