Publish Date: Fri, 05 Oct 2018 (07:13 IST)
Updated Date: Fri, 05 Oct 2018 (07:15 IST)
ಮುಂಬೈ : ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನ ಮಾಡಿದ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರಿಗೆ ಈಗ ಸಂಕಷ್ಟ ಎದುರಾಗಿದೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟಿ ತನುಶ್ರೀ ದತ್ತಾ ಖ್ಯಾತ ನಟ ನಾನಾ ಪಾಟೇಕರ್ ಅವರು ಚಿತ್ರದ ಹಾಡೊಂದರ ಶೂಟಿಂಗ್ ವೇಳೆ ತನ್ನ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ಚಾಕಲೇಟ್: ಡೀಪ್ ಡಾರ್ಕ್ ಸೀಕ್ರೆಟ್ಸ್' ಎಂಬ ಸಿನಿಮಾದಲ್ಲಿ ತನಗೆ ''ಬಟ್ಟೆ ಬಿಚ್ಚಿ ಕ್ಯೂ ಕೊಡು'' ಅಂತ ಹೇಳಿದ ಸಂಗತಿಯನ್ನೂ ಬಯಲು ಮಾಡಿದರು.
ಈ ಆರೋಪವನ್ನು ಅಲ್ಲಗೆಳೆದ ನಟ ನಾನಾ ಪಾಟೇಕರ್ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದೀಗ ತನುಶ್ರೀ ದತ್ತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.