Publish Date: Thu, 04 Oct 2018 (12:08 IST)
Updated Date: Thu, 04 Oct 2018 (12:09 IST)
ಬೆಂಗಳೂರು : ನಟ ದುನಿಯಾ ವಿಜಯ್ ಜಿಮ್ ತರಬೇತುದಾರ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ನಟ ದುನಿಯಾ ವಿಜಯ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ನಡೆಸಲು ಅಸಲಿ ಕಾರಣ ಏನೆಂಬುದು ತಿಳಿದುಬಂದಿದೆ. ದುನಿಯಾ ವಿಜಯ್ ಅಭಿನಯದ, ಸುಂದರ ಗೌಡ ನಿರ್ಮಾಣದ 'ಮಾಸ್ತಿಗುಡಿ' ಸಿನೆಮಾಕ್ಕೆ ಪಾನಿಪುರಿ ಕಿಟ್ಟಿ, ತಮ್ಮ ಸ್ನೇಹಿತರಾದ ಅನಿಲ್ ಹಾಗೂ ಉದಯ್ ಅವರ ಮೂಲಕ ಸುಮಾರು 40 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆಂದು ಹೇಳಲಾಗಿದೆ. ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭದಲ್ಲಿ ಅನಿಲ್ ಹಾಗೂ ಉದಯ್ ದುರಂತ ಸಾವನ್ನಪ್ಪಿದ್ದು, ಮಾಸ್ತಿಗುಡಿ ಬಿಡುಗಡೆಯಾದ ಬಳಿಕ ಪಾನಿಪುರಿ ಕಿಟ್ಟಿ, ತಾವು ಹೂಡಿಕೆ ಮಾಡಿದ್ದ ಹಣ ಮರಳಿಸುವಂತೆ ದುನಿಯಾ ವಿಜಯ್ ಹಾಗೂ ಸುಂದರ್ ಗೌಡ ಅವರ ಬಳಿ ಕೇಳಿದ್ದರಂತೆ.
ಪಾನಿಪುರಿ ಕಿಟ್ಟಿ ಹಣ ಕೇಳಿದ ಸಂದರ್ಭದಲ್ಲಿ, ಮಾಸ್ತಿಗುಡಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣದ ಕಾರಣ ಕೆಲ ಕಾಲದ ಬಳಿಕ ಹಣ ನೀಡುವುದಾಗಿ ಹೇಳಿದ್ದ ದುನಿಯಾ ವಿಜಯ್ ಹಾಗೂ ಸುಂದರ ಗೌಡ ಆ ನಂತರ ಮಾತು ಬದಲಿಸಿದ್ದರಿಂದ ಇವರ ನಡುವೆ ವಾಗ್ವಾದ ನಡೆದು ನಂತರ ಅದು ತಾರಕಕ್ಕೇರಿ ಹಲ್ಲೆ ನಡೆದಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.