ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಂಡ ಸೌರವ್ ಗಂಗೂಲಿ

ಶುಕ್ರವಾರ, 15 ಮಾರ್ಚ್ 2019 (09:25 IST)
ನವದೆಹಲಿ: ಈ ಬಾರಿಯ ಐಪಿಎಲ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರರಾಗಿ ಕೆಲಸ ಮಾಡಲಿದ್ದಾರೆ.


ಈ ಬಾರಿಯಾದರೂ ಟೈಟಲ್ ಗೆಲ್ಲಲೇಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ತಂಡದ ಸಲಹೆಗಾರನಾಗಿ ಗಂಗೂಲಿಯನ್ನು ನೇಮಿಸಿದೆ. ಡೆಲ್ಲಿ ತಂಡಕ್ಕೆ ರಿಕಿ ಪಾಂಟಿಂಗ್ ಕೋಚ್ ಆಗಿದ್ದಾರೆ. ವಿಶೇಷವೆಂದರೆ ಇಬ್ಬರೂ ಹಿಂದೊಮ್ಮೆ ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.

ಡೆಲ್ಲಿ ತಂಡದಲ್ಲಿ ಈ ಬಾರಿ ಐಪಿಎಲ್ ಸ್ಪೆಷಲಿಸ್ಟ್ ಗಳೇ ತುಂಬಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕರಾಗಿರುವ ತಂಡದಲ್ಲಿ ಶಿಖರ್ ಧವನ್, ರಿಷಬ್ ಪಂತ್, ಪೃಥ್ವಿ ಶಾ, ಟ್ರೆಂಟ್ ಬೌಲ್ಟ್ ಮುಂತಾದ ಘಟಾನುಘಟಿಗಳಿದ್ದಾರೆ. ಇದೀಗ ಗಂಗೂಲಿ ಸಲಹೆಗಾರನಾಗಿ ಮತ್ತು ರಿಕಿ ಪಾಂಟಿಂಗ್ ಕೋಚ್ ಆಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೋಚ್ ಗಿಂತಲೂ ಹೆಚ್ಚು ಕ್ರಿಕೆಟಿಗ ರಿಷಬ್ ಪಂತ್ ಫೋನ್ ನಲ್ಲಿ ಯಾರ ಜತೆಗೋ ಮಾತಾಡ್ತಾರಂತೆ!