ರಾಂಚಿ: ಟೀಂ ಇಂಡಿಯಾದಿಂದ ಬಿಡುವು ಪಡೆದಿರುವ ಕ್ರಿಕೆಟಿಗ ಧೋನಿ ಇದೀಗ ಐಪಿಎಲ್ ಗೆ ಸಜ್ಜಾಗುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿ ಐಪಿಎಲ್ ಸಿದ್ಧತೆಗಾಗಿ ಚೆನ್ನೈಗೆ ತೆರಳುವ ಮೊದಲು ದೇವರ ಮೊರೆ ಹೋಗಿದ್ದಾರೆ. ರಾಂಚಿಯ ದಿಯೋರಿ ಮಾ ದೇವಾಲಯಕ್ಕೆ ಭೇಟಿ ನೀಡಿದ ಧೋನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಹಲವು ಬಾರಿ ಧೋನಿ ಇಲ್ಲಿಗೆ ಭೇಟಿ ನೀಡಿ ಮಹತ್ವದ ಟೂರ್ನಿಗೆ ತೆರಳುವ ಮೊದಲು ಪೂಜೆ ಸಲ್ಲಿಸಿದ್ದಿದೆ. ಹಾಗೆಯೇ ಮಹತ್ವದ ಕೂಟದಲ್ಲಿ ಗೆಲುವು ದಾಖಲಿಸಿದಾಗಲೂ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಇದೀಗ ಚೆನ್ನೈ ಗೆಲುವಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಧೋನಿ ಆಗಮನದ ವೇಳೆ ದೇವಾಲಯದಲ್ಲಿ ಸಹಜವಾಗಿಯೇ ನೂಕುನುಗ್ಗಲು ಉಂಟಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ