Publish Date: Thu, 07 Mar 2019 (09:36 IST)
Updated Date: Thu, 07 Mar 2019 (09:38 IST)
ಕೋಲ್ಕೊತ್ತಾ: ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ರೀತಿಯ ಸಂಬಂಧ ಹಳಸಿದ್ದು, ಭಾರತದ ಬಹುತೇಕ ಮೈದಾನದಿಂದ ಪಾಕಿಸ್ತಾನ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸಲಾಗಿತ್ತು.
ಆದರೆ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಮಾತ್ರ ಪಾಕ್ ಮಾಜಿ ನಾಯಕ, ಹಾಲಿ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಇನ್ನೂ ಹಾಗೆಯೇ ಉಳಿದುಕೊಂಡಿದೆ. ಇದನ್ನು ತೆರವುಗೊಳಿಸಲು ಪ.ಬಂಗಾಲ ಕ್ರಿಕೆಟ್ ಅಸೋಸಿಯೇಷನ್ ಮುಖ್ಯಸ್ಥ, ಮಾಜಿ ನಾಯಕ ಸೌರವ್ ಗಂಗೂಲಿ ಒಪ್ಪುತ್ತಿಲ್ಲ.
ಹೀಗಾಗಿ ಇದೀಗ ಗಂಗೂಲಿ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಪುಲ್ವಾಮಾ ದಾಳಿ ನಂತರ ಪಾಕ್ ಜತೆಗೆ ಎಲ್ಲಾ ರೀತಿಯ ಕ್ರೀಡಾ ಸಂಬಂಧಕ್ಕೆ ಕತ್ತರಿ ಹಾಕಬೇಕು ಎಂದು ಆಕ್ರೋಶದಿಂದ ಮಾತನಾಡಿದ್ದ ಗಂಗೂಲಿ ಈಗ ಪಾಕ್ ನಾಯಕನ ಫೋಟೋ ಕಿತ್ತು ಹಾಕಲು ವಿರೋಧಿಸುತ್ತಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ವಿವಾದವಾಗಿ ಮಾರ್ಪಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.