Publish Date: Wed, 06 Mar 2019 (15:17 IST)
Updated Date: Wed, 06 Mar 2019 (15:19 IST)
ಕಲಬುರಗಿ : ಚಿಂಚೋಳಿ ಶಾಸಕ ಉಮೇಶ್ ಜಾಧವ್ ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ಬೇಸರಗೊಂಡಿದ್ದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವುದರ ಮೂಲಕ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಹಾರೈಸಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಇವತ್ತು ಬಹಳ ಸಂತೋಷ ಹಾಗು ಹೆಮ್ಮೆಯಿಂದ ಬಿಜೆಪಿ ಸೇರಿದ್ದೇನೆ. ಇಂದು ನನ್ನನ್ನು ಬಹಳ ಚೆನ್ನಾಗಿ ಬರಮಾಡಿಕೊಂಡಿದ್ದಾರೆ. ನನಗೆ ಒಂದು ಅವಕಾಶ ನೀಡಿ ಅಂತಾ ನಿಮಗೆ ಕೈ ಜೋಡಿಸುತ್ತೆನೆ. ಮೋದಿ ಅವರು ಇನ್ನೊಮ್ಮೆ ಪ್ರಧಾನಿ ಆಗಲು ನಿಮ್ಮ ಬೆಂಬಲ ನನಗೆ ಬೇಕು ಎದು ಹೇಳಿದ್ದಾರೆ.
ಇವತ್ತು ಮಲ್ಲಿಕಾರ್ಜುನ ಖರ್ಗೆ ನಮ್ಮ ಸಮಾಜಕ್ಕೆ ಎಸ್ ಟಿ ಸೇರಿಸದೇ ಕೊಡಲಿ ಪೆಟ್ಟು ಹಾಕಿದ್ದಾರೆ. ಇವತ್ತಿನ ದಿನ ಮಲ್ಲಿಕಾರ್ಜುನ ಖರ್ಗೆ ಕುದುರೆ ಓಡುವುದಿಲ್ಲ. ಉಮೇಶ್ ಜಾಧವ್ ಅವರ ಕುದುರೆ ಓಡುತ್ತದೆ. ಇಂದು ನನಗೊಂದು ಅವಕಾಶ ಮಾಡಿಕೊಡಿ ಎಂದು ಕೈಮುಗಿದು ವಿನಂತಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.