Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆದ್ದೇಬಿಟ್ಟವು ಎಂಬಂತೆ ಆಡುತ್ತಿರುವ ಟೀಂ ಇಂಡಿಯಾ ಹೊಗಳುಭಟ್ಟರಿಗೆ ರಾಹುಲ್ ದ್ರಾವಿಡ್ ವಾರ್ನಿಂಗ್

ವಿಶ್ವಕಪ್ ಗೆದ್ದೇಬಿಟ್ಟವು ಎಂಬಂತೆ ಆಡುತ್ತಿರುವ ಟೀಂ ಇಂಡಿಯಾ ಹೊಗಳುಭಟ್ಟರಿಗೆ ರಾಹುಲ್ ದ್ರಾವಿಡ್ ವಾರ್ನಿಂಗ್
ಮುಂಬೈ , ಗುರುವಾರ, 21 ಮಾರ್ಚ್ 2019 (09:24 IST)
ಮುಂಬೈ: ಟೀಂ ಇಂಡಿಯಾ ಬಲಿಷ್ಠವಾಗಿದೆ. ಈ ಬಾರಿ ವಿಶ್ವಕಪ್ ನ್ನು ಸುಲಭವಾಗಿ ಗೆದ್ದು ಬರುತ್ತದೆ ಎಂದೆಲ್ಲಾ ಹೇಳುವ ಹೊಗಳುಭಟ್ಟರಿಗೆ ‘ವಾಲ್’ ರಾಹುಲ್ ದ್ರಾವಿಡ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.


ಭಾರತಕ್ಕೆ ವಿಶ್ವಕಪ್ ಗೆಲುವು ಸುಲಭವಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.

‘ಕೆಲವರು ಟೀಂ ಇಂಡಿಯಾ ಈ ಬಾರಿ ಸುಲಭವಾಗಿ ವಿಶ್ವಕಪ್ ಗೆದ್ದು ಬರುತ್ತದೆ ಎಂದುಕೊಂಡಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ. ಬೇಕಿದ್ದರೆ ಇತ್ತೀಚೆಗಿನ ಆಸ್ಟ್ರೇಲಿಯಾ ಸರಣಿಯ ಫಲಿತಾಂಶ ಗಮನಿಸಿ. ನಾವು ಚೆನ್ನಾಗಿ ಆಡಿದರೆ ಮಾತ್ರ ವಿಶ್ವಕಪ್ ನಲ್ಲಿ ಗೆಲ್ಲಲು ಸಾಧ್ಯ’ ಎಂದು ಟೀಂ ಇಂಡಿಯಾಕ್ಕೆ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಗೆ ವಿರಾಟ್ ಉತ್ತಮ ನಾಯಕರು ಹೌದೋ, ಅಲ್ವೋ? ಗಂಗೂಲಿ ಹೇಳ್ತಾರೆ ಕೇಳಿ