Publish Date: Thu, 21 Mar 2019 (09:39 IST)
Updated Date: Thu, 21 Mar 2019 (09:42 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಲೈವಾ ಎಂಎಸ್ ಧೋನಿ ಈ ಬಾರಿ ಐಪಿಎಲ್ ನಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ ಎಂಬುದನ್ನು ಕೋಚ್ ಸ್ಟೀಫನ್ ಫ್ಲೆಮಿಂಗ್ ಬಹಿರಂಗಪಡಿಸಿದ್ದಾರೆ.
ಟೀಂ ಇಂಡಿಯಾದಲ್ಲಂತೂ ಸದಾ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸದಾ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಐಪಿಎಲ್ ನಲ್ಲೂ ಮುಂದುವರಿದಿದೆ. ಆದರೆ ಕೋಚ್ ಫ್ಲೆಮಿಂಗ್ ಅದಕ್ಕೆಲ್ಲಾ ತೆರೆ ಎಳೆದಿದ್ದಾರೆ.
‘ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಇದುವರೆಗೆ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಬಾರಿ ಕೇದಾರ್ ಜಾಧವ್ ನಂತಹ ಹೊಸ ಬ್ಯಾಟ್ಸ್ ಮನ್ ಗಳಿದ್ದಾರೆ. ಹಾಗಿದ್ದರೂ ಧೋನಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಅವರ ಕ್ರಮಾಂಕ ಬದಲಾಗದು’ ಎಂದು ಫ್ಲೆಮಿಂಗ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ