Publish Date: Fri, 22 Mar 2019 (08:58 IST)
Updated Date: Fri, 22 Mar 2019 (09:00 IST)
ಮುಂಬೈ: ಕಳೆದ ಬಾರಿ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಭರ್ಜರಿ ಪ್ರದರ್ಶನ ನೀಡಿದ್ದ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಈ ಬಾರಿ ಐಪಿಎಲ್ ಆಡೋದೇ ಅನುಮಾನವಾಗಿದೆ.
ವಿಶ್ವಕಪ್ ಗೆ ಸ್ಥಾನ ಪಡೆಯಬಹುದಾದ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಕೆಎಲ್ ರಾಹುಲ್ ಗೆ ದಣಿವಾಗದಂತೆ ನೋಡಿಕೊಳ್ಳಲು ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡಲು ಪಂಜಾಬ್ ಕೋಚ್ ಮೈಕ್ ಹಸನ್ ಯೋಚನೆ ಮಾಡುತ್ತಿದ್ದಾರೆ.
ರಾಹುಲ್ ಜತೆಗೆ ಟೀಂ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿರುವ ವೇಗಿ ಮೊಹಮ್ಮದ್ ಶಮಿಗೂ ಹೆಚ್ಚಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲು ಮೈಕ್ ಹಸನ್ ಚಿಂತನೆ ನಡೆಸಿದ್ದಾರೆ. ಹೀಗಾಗಿ ಈ ಇಬ್ಬರೂ ಸ್ಟಾರ್ ಆಟಗಾರರು ಕಿಂಗ್ಸ್ ಇಲೆವೆನ್ ಪರ ಈ ಬಾರಿ ಪೂರ್ಣ ಪ್ರಮಾಣದ ಐಪಿಎಲ್ ಆಡುವುದು ಅನುಮಾನವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ