Daily Horoscope

Select Your Language

Notifications

webdunia
webdunia
webdunia
webdunia

ಚಲಿಸುತ್ತಿರುವ ಕಾರಿನ ಮೇಲೇ ಬಿತ್ತು ವಿಮಾನ: ಭಯಾನಕ ವಿಡಿಯೋ ಇಲ್ಲಿದೆ

Plane crash
Photo Credit: X
ಫ್ಲೋರಿಡಾ: ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಇದ್ದಕ್ಕಿದ್ದಂತೆ ನಿಮ್ಮ ಕಾರಿನ ಮೇಲೆ ವಿಮಾನವೊಂದು ಬಂದು ಲ್ಯಾಂಡ್ ಆದರೆ ಹೇಗಿರಬೇಡ? ಅಂತಹದ್ದೇ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸೋಮವಾರ ಘಟನೆ ನಡೆದಿದೆ ಎನ್ನಲಾಗಿದೆ. ಫ್ಲೋರಿಡಾದ ಬ್ರೆವರ್ಡ್ ಕೌಂಟಿಯಲ್ಲಿ ವಿಮಾನವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಲ್ಯಾಂಡ್ ಆಗಿ ಭಾರೀ ಅನಾಹುತವಾಗಿದೆ.

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ರಸ್ತೆಯಲ್ಲೇ ತುರ್ತಾಗಿ ಲ್ಯಾಂಡಿಂಗ್ ಮಾಡಬೇಕಾದ ಪರಿಸ್ಥಿತಿ ಬಂತು. ಆದರೆ ಈ ವೇಳೆ ಸುಗಮ ಲ್ಯಾಂಡಿಂಗ್ ಮಾಡಲು ಪೈಲೆಟ್ ಗೆ ಸಾಧ್ಯವಾಗಲಿಲ್ಲ. ಬದಲಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರು ಪುಡಿಗಟ್ಟಿ ಲ್ಯಾಂಡ್ ಆಗಿದೆ.

ಸೆಸ್ನಾ-172 ಮಾದರಿಯ ಸಣ್ಣ ವಿಮಾನ ಅಪಘಾತಕ್ಕೀಡಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ವಿಮಾನ ಲ್ಯಾಂಡಿಂಗ್ ಆದ ಭಯಾನಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಡಿಕೆ ಶಿವಕುಮಾರ್‌