ಬೆಳಗಾವಿ: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ಮಾತನಾಡುತ್ತಾ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ವಿರುದ್ಧ ಸಾಮೂಹಿಕ ಸಮಾಧಿ ಪ್ರಕರಣ, ಸಾಮೂಹಿಕ ಅತ್ಯಾಚಾರ ಆರೋಪ ಕೇಳಿಬಂದಿತ್ತು.
ಈ ವಿಚಾರ ಸಂಬಂಧ ಇಂದು ಪ್ರತಿಕ್ರಿಯಿಸಿದ ಡಿಸಿಎಂ ಇಂತಹ ವಿವಾದಗಳು ಹಲವು ತಲೆಮಾರುಗಳಿಂದ ಇರುವ ಸಂಸ್ಥೆಗಳಿಗೆ ಧಕ್ಕೆ ತರುತ್ತದೆ. ಇದು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ನಾನು ವಿಧಾನಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದೆ.
ಕಾನೂನು ತನ್ನ ದಾರಿ ಹಿಡಿಯಬೇಕು. ಇಂತಹ ವಿವಾದಗಳಿಂದ ಹಲವು ತಲೆಮಾರುಗಳಿಂದ ನಡೆಯುತ್ತಿರುವ ಸಂಸ್ಥೆಗಳಿಗೆ ಹಾನಿಯಾಗಬಹುದು.
ಆಗಸ್ಟ್ 31 ರಂದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಸಮಾಧಿ ಆರೋಪ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ತಳ್ಳಿಹಾಕಿದರು.
ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಈ ಅನುಮಾನವನ್ನು ಹೋಗಲಾಡಿಸಲು ಎಸ್‌ಐಟಿ ರಚಿಸಲಾಗಿದೆ ಎಂದಿದ್ದರು.