ಬೆಂಗಳೂರು: ನಿಮ್ಮ ವಂಧಿಮಾಗದರಿಂದ ಕನ್ನಡ ರಾಮಯ್ಯ ಎಂದು ಹೊಗಳಿಸಿಕೊಳ್ತೀರಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊಡಲು ದುಡ್ಡಿಲ್ವಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕಗಳು ಹಣಕಾಸಿನ ಕೊರತೆಯಲ್ಲಿದ್ದು, ಕನ್ನಡ ಸಮ್ಮೇಳನಗಳು ನಡೆಯುತ್ತಿಲ್ಲ ಎಂಬ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ್ದಾರೆ.
ಕನ್ನಡ ರಾಮಯ್ಯ ಎಂದು ವಂಧಿಮಾಗದರಿಂದ ಹೊಗಳಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರೆ, ಇದೇನಾ ನಿಮ್ಮ ಅಸಲಿ ಕನ್ನಡ ಪ್ರೇಮ?
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಜಿಲ್ಲಾ, ತಾಲ್ಲೂಕು ಸಮ್ಮೇಳನಗಳಿಗೆ ಹಣ ಬೇಡುವ ಪರಿಸ್ಥಿತಿ ತಂದಿಟ್ಟಿದ್ದೀರಲ್ಲ ಸ್ವಾಮಿ, ಕನ್ನಡದ ಹೆಸರಿನಲ್ಲಿ ರಾಜಕಾರಣ ಮಾಡುವ ನಿಮ್ಮಂತಹ ನಾಡದ್ರೋಹಿಗಳಿಂದ ಕನ್ನಡಿಗರು ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದಿದ್ದಾರೆ.