ನ್ಯೂಯಾರ್ಕ್: ಎದ್ದರೂ ಬಿದ್ದರೂ ಸುಂಕ ಸುಂಕ ಎಂದು ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಬೆದರಿಕೆ ಹಾಕುತ್ತಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಇಂದಿನ ಫೋಟೋ ನೋಡಿ ಎಲ್ಲರೂ ಇವರ ಮೂತಿಗೆ ಏನಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಒಮ್ಮೆ ಭಾರತ, ಚೀನಾ, ರಷ್ಯಾ ಮೇಲೆ ಸುಂಕದ ಮೇಲೆ ಸುಂಕ ಹಾಕಿ ಬೆದರಿಸಲು ನೋಡಿದರೆ ಅದರಿಂದ ಕೈ ಸುಟ್ಟುಕೊಂಡ ಮೇಲೆ ಭಾರತದ ಜೊತೆ ಮತ್ತೆ ಸ್ನೇಹ ಹಸ್ತ ಚಾಚುವ ಮೂಲಕ ಸುದ್ದಿಯಲ್ಲಿದ್ದರು.
ನಿನ್ನೆ ಅಮೆರಿಕಾದ 9/11 ರ ಭಯೋತ್ಪಾದಕ ದಾಳಿಯ ಸ್ಮರಣಾರ್ಥವಾಗಿ ನಡೆದಿದ್ದ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಟ್ರಂಪ್ ಬಾಯಿಯ ಭಾಗ ಒಂದು ಕಡೆ ಜೋತು ಬಿದ್ದಂತಿದೆ. ಇದನ್ನು ನೋಡಿ ಟ್ರಂಪ್ ಗೆ ಏನಾದ್ರೂ ಲಕ್ವ ಹೊಡೀತಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಕೆನ್ನೆಗಳು ಜೋತು ಬಿದ್ದಂತಿದ್ದರೆ ತುಟಿ ಒಂದು ಕಡೆಗೆ ವಾಲಿದಂತಿದೆ. ಟ್ರಂಪ್ ಈ ಅವತಾರ ನೋಡಿ ಜನ ಅವರ ಆರೋಗ್ಯ ಏನಾದರೂ ಕೈ ಕೊಟ್ಟಿದೆಯೇ ಎಂದು ಅನುಮಾನಿಸುತ್ತಿದ್ದಾರೆ. ಈ ಬಗ್ಗೆ ಶ್ವೇತಭವನದಿಂದಲೇ ಸ್ಪಷ್ಟನೆ ಬರಬೇಕಿದೆ.