ಯುನೈಟೆಡ್ ಸ್ಟೇಟ್ಸ್‌ನ ಪ್ರಸಿದ್ಧ ಕನ್‌ಸರ್ವೇಟಿವ್ ಕಾರ್ಯಕರ್ತ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಮಿತ್ರ ಚಾರ್ಲಿ ಕಿರ್ಕ್ ಅವರು ಬುಧವಾರ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ವೀಡಿಯೊದಲ್ಲಿ ಚಾರ್ಲಿ ಕಿರ್ಕ್ ಅವರು ದೊಡ್ಡ ಹೊರಾಂಗಣ ಜನಸಂದಣಿಯನ್ನು ಉದ್ದೇಶಿಸಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ಗುಂಡೇಟು ತಗುಲಿದೆ. ನೇರವಾಗಿ ಕುತ್ತಿಗೆ ಗುಂಡು ಹೊಕ್ಕಿದ್ದರಿಂದ ತೀವ್ರ ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದಾರೆ.
ಕಿರ್ಕ್ ಮಾತನಾಡುವ ಪ್ರವಾಸದಲ್ಲಿದ್ದರು ಮತ್ತು UVU ನಲ್ಲಿ ಅವರ ನಿಲುಗಡೆಯು ಅವರ "ಅಮೇರಿಕನ್ ಕಮ್‌ಬ್ಯಾಕ್ ಟೂರ್" ನ ಭಾಗವಾಗಿ ದೇಶದಾದ್ಯಂತದ ವಿಶ್ವವಿದ್ಯಾನಿಲಯಗಳಲ್ಲಿ ಕನಿಷ್ಠ 15 ನಿಗದಿತ ಕಾರ್ಯಕ್ರಮಗಳಲ್ಲಿ ಮೊದಲನೆಯದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಗುಂಡೇಟು ತಗುಲುತ್ತಿದ್ದ ಹಾಗೇ ಚಾರ್ಲಿ ಕಿರ್ಕ್ ಕುರ್ಚಿಯಿಂದ ಕುಸಿದು ಬಿದ್ದಿದ್ದಾನೆ. ಅವರನ್ನು ಕೊಂದ ಗುಂಡು ಕ್ಯಾಂಪಸ್‌ನ ಮೇಲ್ಛಾವಣಿಯಿಂದ ಬಂದಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ. ಕಪ್ಪು ಬಟ್ಟೆ ಧರಿಸಿದ ವ್ಯಕ್ತಿ ಗುಂಡು ಹಾರಿಸಿದ್ದಾರೆ, ಇದು ಗುರಿಯಾಗಿಸಿಕೊಂಡು ಮಾಡಿದ ಹತ್ಯೆಯಾಗಿದೆ.