Select Your Language

Notifications

webdunia
webdunia
webdunia
webdunia

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

Sampriya

ಒಡಿಶಾ , ಶುಕ್ರವಾರ, 20 ಜೂನ್ 2025 (20:13 IST)
ಒಡಿಶಾ: ಪುರಿ ಭಗವಾನ್ ಜಗನ್ನಾಥ ದರ್ಶನಕ್ಕಾಗಿ ಭೇಟಿ ನೀಡುವ ಸಲುವಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು ನಿರಾಕರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. 

ಶುಕ್ರವಾರ ವಾಷಿಂಗ್ಟನ್‌ಗೆ ಭೇಟಿ ನೀಡುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನಿಸಿದ್ದರು. ಆದರೆ ಭಗವಾನ್ ಜಗನ್ನಾಥನ ಪವಿತ್ರ ಭೂಮಿ ಒಡಿಶಾಗೆ ಬರುವ ಸಲುವಾಗಿ ವಿದೇಶ ಪ್ರವಾಸವನ್ನು ರದ್ದು ಮಾಡಿರುವುದಾಗಿ ಹೇಳಿದರು. 

ಭುವನೇಶ್ವರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನಾನು ಜಿ7 ಶೃಂಗಸಭೆಗಾಗಿ ಕೆನಡಾದಲ್ಲಿದ್ದೆ, ಯುಎಸ್ ಅಧ್ಯಕ್ಷ ಟ್ರಂಪ್ ನನ್ನನ್ನು ವಾಷಿಂಗ್ಟನ್‌ಗೆ ಕರೆದು ಚರ್ಚೆ ಮತ್ತು ಊಟಕ್ಕೆ ಕರೆದಿದ್ದರು. ನಾನು ಜಗನ್ನಾಥನ ನಾಡಾದ ಒಡಿಶಾಗೆ ಭೇಟಿ ನೀಡಬೇಕಾಗಿದೆ ಎಂದು ಹೇಳಿ ಆಹ್ವಾನಕ್ಕೆ ಧನ್ಯವಾದಗಳು. ನಾನು ಅವರ ಆಹ್ವಾನವನ್ನು ವಿನಮ್ರವಾಗಿ ತಿರಸ್ಕರಿಸಿದೆ" ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯ ಚೊಚ್ಚಲ ಸರ್ಕಾರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು ಮತ್ತು ₹ 18,600 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ