ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು 67ನೇ ಹುಟ್ಟುಹಬ್ಬದ ಸಂಭ್ರಮದಲಿದ್ದಾರೆ.  ಇದೀಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಹುಟ್ಟುಹಬ್ಬದ ದಿನವೇ ದ್ರೌಪದಿ ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 
									
			
			 
 			
 
 			
					
			        							
								
																	ದ್ರೌಪದಿ ಅವರಿಗೆ ದೃಷ್ಟಿ ವಿಕಲಾಂಗ ಮಕ್ಕಳು ಹಾಡಿನ ಮೂಲಕ ಬರ್ತಡೇ ಶುಭಾಶಯವನ್ನು ಕೋರಿದರು. ಈ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದರು. 
									
										
								
																	ಸುದ್ದಿ ಸಂಸ್ಥೆ ANI ಹಂಚಿಕೊಂಡ ವಿಡಿಯೋಗಳ ಪ್ರಕಾರ, ದೃಷ್ಟಿ ವಿಕಲಾಂಗ ವಿದ್ಯಾರ್ಥಿಗಳು ಅವರಿಗಾಗಿ ಹುಟ್ಟುಹಬ್ಬದ ಹಾಡನ್ನು ಹಾಡಿದರು. ಅವರ ಹಾಡನ್ನು ಕೇಳುತ್ತಿದ್ದ ಹಾಗೇ  ಮುರ್ಮು ಭಾವುಕರಾದರು ಮತ್ತು ಕಣ್ಣೀರು ಹಾಕಿದರು. ದ್ರೌಪದಿ ಅವರ ಭಾವನಾತ್ಮಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
									
											
									
			        							
								
																	ಅಧ್ಯಕ್ಷ ಮುರ್ಮು ಅವರು ಶನಿವಾರದಂದು ಅಂತಾರಾಷ್ಟ್ರೀಯ ಯೋಗ ದಿನದಂದು ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
									
			                     
							
							
			        							
								
																	ಇಂದು ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜಕೀಯ ಕ್ಷೇತ್ರದಾದ್ಯಂತದ ಅನೇಕ ನಾಯಕರು ರಾಷ್ಟ್ರಪತಿಯವರ 67 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.