Select Your Language

Notifications

webdunia
webdunia
webdunia
webdunia

ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ

Namma Metro

Krishnaveni K

ಬೆಂಗಳೂರು , ಶುಕ್ರವಾರ, 20 ಜೂನ್ 2025 (16:25 IST)
ಬೆಂಗಳೂರು: ಭಾನುವಾರ ಪರ್ಪಲ್ ಲೈನ್ ಮೆಟ್ರೋದಲ್ಲಿ ಪ್ರಯಾಣ ಮಾಡಬೇಕೆಂದುಕೊಂಡಿದ್ದರೆ ಬದಲಾವಣೆ ಗಮನಿಸಿ. ಭಾನುವಾರ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಭಾನುವಾರವೂ ಅನೇಕರ ವೀಕೆಂಡ್ ಸುತ್ತಾಡಕ್ಕಾಗಿ ಮೆಟ್ರೋ ಆಶ್ರಯಿಸುತ್ತಾರೆ. ಆದರೆ ಈ ಭಾನುವಾರ ಪರ್ಪಲ್ ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಟ್ರಿನಿಟಿ ಸರ್ಕಲ್ ಮತ್ತು ಹಲಸೂರು ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೆಟ್ರೋ ಈ ಮಾರ್ಗದಲ್ಲಿ ಇರಲ್ಲ.

ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಆದರೆ ಬೈಯಪ್ಪನಹಳ್ಳಿಯಿಂದ ಕಾಡುಗೋಡಿಯವರೆಗೆ ಸಂಚರಿಸಬಹುದು. ಚಲ್ಲಘಟ್ಟದಿಂದ ಎಂಜಿ ರಸ್ತೆ ನಡುವಿನ ಸಂಚಾರ ಮಾತ್ರ ಸ್ಥಗಿತವಾಗಲಿದೆ.

9 ಗಂಟೆಯ ಬಳಿಕ ಎಂದಿನಂತೆ ಸಂಚಾರವಿರಲಿದೆ. ಇನ್ನು, ಇದು ಕೇವಲ ನೇರಳೆ ಮಾರ್ಗಕ್ಕೆ ಮಾತ್ರ ಸೀಮಿತವಾಗಿದೆ. ಹಸಿರು ಮಾರ್ಗದಲ್ಲಿ ಎಂದನಿಂತೆ ಬೆಳಿಗ್ಗೆಯಿಂದಲೇ ಮೆಟ್ರೋ ಸಂಚಾರವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನವನ್ನು ಕ್ರ್ಯಾಶ್ ಮಾಡುವುದಾಗಿ ವಿಮಾನದೊಳಗೆ ಬೆಂಗಳೂರು ವೈದ್ಯೆ ಚೀರಾಟ, ಹೊರಕಳುಹಿಸಿದ ಕ್ಯಾಬಿನ್ ಸಿಬ್ಬಂದಿ