Select Your Language

Notifications

webdunia
webdunia
webdunia
webdunia

ಮೋದಿ, ಹಣಕಾಸು ಸಚಿವರನ್ನು ಬಿಟ್ರೆ ಭಾರತದ ಆರ್ಥಿಕತೆ ಸತ್ತಿದೆ ಎಂದು ಜಗತ್ತಿಗೆ ಗೊತ್ತು: ರಾಹುಲ್ ಗಾಂಧಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ

Sampriya

ನವದೆಹಲಿ , ಗುರುವಾರ, 31 ಜುಲೈ 2025 (16:19 IST)
Photo Credit X
ನವದೆಹಲಿ: ಭಾರತದ ಆರ್ಥಿಕತೆ "ಸತ್ತಿದೆ" ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಒಪ್ಪಿಕೊಂಡ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಯುಎಸ್ ಅಧ್ಯಕ್ಷರು ಸತ್ಯವನ್ನು ಹೇಳಿದ್ದಕ್ಕಾಗಿ "ಸಂತೋಷ" ಎಂದು ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿದರೆ ಇಡೀ ಜಗತ್ತಿಗೆ ಭಾರತದ ಆರ್ಥಿಕತೆ “ಸತ್ತಿದೆ” ಎಂದು ತಿಳಿದಿದೆ ಎಂದು ಹೇಳಿದರು.

ಭಾರತದ ಆರ್ಥಿಕತೆಯು ಸತ್ತ ಆರ್ಥಿಕತೆ ಎಂದು ಎಲ್ಲರಿಗೂ ತಿಳಿದಿದೆ. ಅಧ್ಯಕ್ಷ ಟ್ರಂಪ್ ಒಂದು ಸತ್ಯವನ್ನು ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಭಾರತದ ಆರ್ಥಿಕತೆಯು ಸತ್ತ ಆರ್ಥಿಕತೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಅದಾನಿಗೆ ಸಹಾಯ ಮಾಡಲು ಬಿಜೆಪಿ ಆರ್ಥಿಕತೆಯನ್ನು ಮುಗಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ "ಕದನ ವಿರಾಮ"ಕ್ಕೆ ಮಧ್ಯಸ್ಥಿಕೆ ವಹಿಸುವ ಅವರ ಹೇಳಿಕೆಗಳು, ಭಾರತೀಯ ಜೆಟ್‌ಗಳ ನಷ್ಟ ಮತ್ತು ಇತ್ತೀಚಿನ ಶೇಕಡಾ 25 ರಷ್ಟು ಸುಂಕಗಳ ಘೋಷಣೆಯಂತಹ ಟ್ರಂಪ್ ಅವರ ಹಲವಾರು ಹೇಳಿಕೆಗಳ ಬಗ್ಗೆ ಕಾಂಗ್ರೆಸ್ ಸಂಸದರು ಪ್ರಧಾನಿ ಮೋದಿ  ಮುಂದೆ ಹಲವು ಪ್ರಶ್ನೆ ಮುಂದಿಟ್ಟರು.

Share this Story:

Follow Webdunia kannada

ಮುಂದಿನ ಸುದ್ದಿ

ಮಹದೇವಪುರ, ರಾಜಾಜಿನಗರದಲ್ಲಿ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿಯಲ್ಲಿ ಸಾಕ್ಷಿಯಿದೆ: ಸಿದ್ದರಾಮಯ್ಯ