Select Your Language

Notifications

webdunia
webdunia
webdunia
webdunia

ಭಾರತವೇ ಟ್ರಂಪ್ ಕ್ಷಮೆ ಯಾಚಿಸುತ್ತೆ ಎಂದ ಅಮೆರಿಕಾ ವಾಣಿಜ್ಯ ಕಾರ್ಯದರ್ಶಿ: ಓ ಭ್ರಮೆ ಎಂದ ಜನ

Trump-Modi

Krishnaveni K

ನವದೆಹಲಿ , ಶನಿವಾರ, 6 ಸೆಪ್ಟಂಬರ್ 2025 (11:38 IST)
ನವದೆಹಲಿ: ಅಮೆರಿಕಾ ವಿಧಿಸಿರುವ ಶೇ.50 ರ ಸುಂಕದಿಂದ ಹೈರಾಣಾಗಿ ಭಾರತವೇ ಡೊನಾಲ್ಡ್ ಟ್ರಂಪ್ ಬಳಿ ಕ್ಷಮೆಯಾಚಿಸುತ್ತದೆ ಎಂದು ಅಲ್ಲಿನ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಜನ ಓ ಭ್ರಮೆ ಎನ್ನುತ್ತಿದ್ದಾರೆ.

ರಷ್ಯಾದ ತೈಲ ಖರೀದಿಸದಂತೆ ಅಮೆರಿಕಾ ಒತ್ತಡ ಹೇರಿದರೂ ಭಾರತ ಮಣಿದಿಲ್ಲ. ಆದರೂ ಇದೆಲ್ಲಾ ಹೆಚ್ಚು ದಿನ ನಡೆಯದು. ಇನ್ನು ಎರಡೇ ತಿಂಗಳಲ್ಲಿ ಭಾರತ ತಾನಾಗಿಯೇ ಡೊನಾಲ್ಡ್ ಟ್ರಂಪ್ ಕ್ಷಮೆ ಯಾಚಿಸಿ ವ್ಯಾಪಾರ ಮುಂದುವರಿಸುತ್ತದೆ ಎಂದು ಹೂವಾರ್ಡ್ ಹೇಳಿದ್ದಾರೆ.

ಸಂದರ್ಶನವೊಂದದರಲ್ಲಿ ಮಾತನಾಡಿರುವ ಅವರು ಒಂದು ವೇಳೆ ಅಮೆರಿಕಾ ಮಾತನ್ನು ಭಾರತ ಕೇಳದೇ ಇದ್ದರೆ ಶೇ.50 ರಷ್ಟು ಸುಂಕವನ್ನು ಮುಂದುವರಿಸಬೇಕಾಗುತ್ತದೆ. ಭಾರತ ರಷ್ಯಾ ತೈಲ ಖರೀದಿಸುವುದನ್ನು ನಿಲ್ಲಿಸಲ್ಲ, ಬ್ರಿಕ್ಸ್ ನ ಭಾಗವಾಗುವನ್ನು ನಿಲ್ಲಿಸಲ್ಲ. ನೀವು ರಷ್ಯಾ ಮತ್ತು ಚೀನಾ ಸ್ನೇಹ ಬಯಸಿದರೆ ಹೋಗಿ. ಆದರೆ ಅಮೆರಿಕಾದ ಡಾಲರ್ ನ್ನು ಬೆಂಬಲಿಸಿ. ನಿಮ್ಮ ಅತೀ ದೊಡ್ಡ ಕ್ಲೈಂಟ್ ಬೆಂಬಲಿಸಿ. ಇಲ್ಲದಿದ್ದರೆ 50% ಸುಂಕ ಪಾವತಿಸುವುದನ್ನು ಮುಂದುವರಿಸಿ’ ಎಂದಿದ್ದಾರೆ.

ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಅಮೆರಿಕಾಗೆ ಭ್ರಮೆಯಿರಬೇಕು. ಭಾರತ ಈಗಲೂ ತನ್ನ ಕಾಲ ಬುಡುದಲ್ಲೇ ಬಿದ್ದಿರುತ್ತದೆ ಎನ್ನುವ ಭ್ರಮೆ. ಅದಕ್ಕೇ ಅಲ್ಲಿನವರು ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎರಡು ಕೋಟಿ ಅನುದಾನಕ್ಕೆ ಅಂಗಲಾಚಬೇಕು, ಇನ್ನೆಷ್ಟು ದಿನ ಈ ಭಂಡ ಬಾಳು: ಆರ್ ಅಶೋಕ