ನ್ಯೂಯಾರ್ಕ್: ಭಾರತದ ಮೇಲೆ ಸುಂಕ ಹೇರಿ ಈಗ ಅಮೆರಿಕಾಗೆ ತನ್ನ ಬಾಲವನ್ನು ತಾನೇ ಸುಟ್ಟುಕೊಂಡ ಸ್ಥಿತಿಯಾಗಿದೆ. ಹೀಗಾಗಿ ಹೇಳಿದ್ದನ್ನೇ ಹೇಳಿಕೊಳ್ತಿದ್ದಾರೆ, ಇದನ್ನು ನೋಡಿದ್ರೆ ಇದು ಹೊಟ್ಟೆ ಉರಿ ಅಲ್ದೇ ಇನ್ನೇನು ಎನ್ನುವಂತಾಗಿದೆ.
ಮೊನ್ನೆಯಷ್ಟೇ ಡೊನಾಲ್ಡ್ ಟ್ರಂಪ್ ಭಾರತ ನಮ್ಮ ಬಳಿ ಶೂನ್ಯ ಟಾರಿಫ್ ಡೀಲ್ ಮಾಡಲು ಬಂದಿತ್ತು. ಆದರೆ ಅಷ್ಟರಲ್ಲೇ ಎಲ್ಲಾ ತಡವಾಗಿತ್ತು ಎಂದಿದ್ದರು. ರಷ್ಯಾ, ಚೀನಾ ಅಧ್ಯಕ್ಷರ ಜೊತೆ ಶಾಂಘೈ ಶೃಂಗ ಸಭೆಯಲ್ಲಿ ಮೋದಿ ದೋಸ್ತಿ ಪ್ರದರ್ಶನ ಮಾಡಿದ್ದರ ಬೆನ್ನಲ್ಲೇ ಟ್ರಂಪ್ ರಿಂದ ಇಂತಹ ಹೇಳಿಕೆ ಬಂದಿತ್ತು.
ಇದೀಗ ಮತ್ತೆ ಟ್ರಂಪ್ ಅದೇ ಹೇಳಿಕೆ ನೀಡಿದ್ದಾರೆ. ಭಾರತ ಅತೀ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದೆ. ನಾವು ಸುಂಕ ಹೆಚ್ಚಿಸಿದ ಬೆನ್ನಲ್ಲೇ ಭಾರತ ಶೂನ್ಯ ಸುಂಕದ ಆಫರ್ ನೀಡಿತ್ತು. ಆದರೆ ಆಗಲೇ ತಡವಾಗಿತ್ತು. ಒಂದು ವೇಳೆ ನಾವು ಸುಂಕ ಏರಿಕೆ ಮಾಡದೇ ಇದ್ದಿದ್ದರೆ ಅವರು ಶೂನ್ಯ ಸುಂಕದ ಆಫರ್ ಮಾಡುತ್ತಿರಲಿಲ್ಲ ಎಂದು ತಾವು ಸುಂಕ ಏರಿಕೆ ಮಾಡಿದ್ದನ್ನು ಮತ್ತೊಮ್ಮೆ ಸಮರ್ಥಿಸಿದ್ದಾರೆ. ಇದನ್ನು ನೋಡ್ತಿದ್ದರೆ ಭಾರತ ಕ್ಯಾರೇ ಮಾಡದಿರುವುದಕ್ಕೆ ಟ್ರಂಪ್ ಎಷ್ಟು ಹೊಟ್ಟೆ ಉರಿದುಕೊಂಡಿರಬಹುದು ಎಂದು ಗೊತ್ತಾಗುತ್ತದೆ. ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿದ್ದಕ್ಕೆ ಅಮೆರಿಕನ್ನರೇ ಅವರನ್ನು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ತಮ್ಮ ಸುಂಕ ಏರಿಕೆ ನೀತಿಯನ್ನು ಸಮರ್ಥಿಸಿಕೊಳ್ಳಲು ಟ್ರಂಪ್ ಪದೇ ಪದೇ ಇದೇ ಹೇಳಿಕೆ ನೀಡುತ್ತಿದ್ದಾರೆ.