ನವದೆಹಲಿ: ಭಾರತದ ಮೇಲೆ ಬೇಕಾಬಿಟ್ಟಿ ಸುಂಕ ಹೇರಿ ವಿಷ ಕಾರುತ್ತಿದ್ದ ಡೊನಾಲ್ಡ್ ಟ್ರಂಪ್ ಗೆ ಈಗ ನಿಜ ಅರಿವಾದಂತಿದೆ. ಇದೀಗ ಮೋದಿ ನನ್ನ ಬೆಸ್ಟ್ ಫ್ರೆಂಡ್ ಎಂದಿದ್ದಾರೆ, ಇದಕ್ಕೆ ಪ್ರಧಾನಿ ಪ್ರತಿಕ್ರಿಯೆ ಏನಿತ್ತು ನೋಡಿ.
ಭಾರತದ ಮೇಲೆ ರಷ್ಯಾದಿಂದ ತೈಲ ಖರೀದಿಸದಂತೆ ಒತ್ತಡ ಹೇರಿದ್ದ ಅಮೆರಿಕಾ ಶೇ.50 ಸುಂಕ ವಿಧಿಸಿ ಹುಚ್ಚಾಟ ಮೆರೆದಿತ್ತು. ಆದರೆ ಭಾರತ ಈ ಬೆದರಿಕೆ ಬಗ್ಗಲಿಲ್ಲ. ಬದಲಾಗಿ ರಷ್ಯಾ, ಚೀನಾಗೆ ಹತ್ತಿರವಾಗಿದೆ. ಈ ಮೂರೂ ರಾಷ್ಟ್ರಗಳು ಒಗ್ಗಟ್ಟಾಗುತ್ತಿದ್ದಂತೇ ಈಗ ಟ್ರಂಪ್ ಗೆ ಒಳಗೊಳಗೇ ತಳಮಳ ಶುರುವಾಗಿದೆ.
ಈ ಹಿನ್ನಲೆಯಲ್ಲಿ ನಾವು ಭಾರತ, ರಷ್ಯಾವನ್ನು ಕಳೆದುಕೊಂಡೆವು ಎನಿಸುತ್ತಿದೆ ಎಂದು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಅವರು ಭಾರತದ ಪ್ರಧಾನಿ ಮೋದಿ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೋದಿ ನನ್ನ ಬೆಸ್ಟ್ ಫ್ರೆಂಡ್. ಅವರು ಗ್ರೇಟ್ ಲೀಡರ್.
ಆದರೆ ಈಗ ಅವರು ಮಾಡುತ್ತಿರುವ ಕೆಲಸಗಳು ನನಗೆ ಇಷ್ಟವಾಗುತ್ತಿಲ್ಲ. ಆದರೆ ಭಾರತ ಮತ್ತು ಅಮೆರಿಕಾ ನಡುವೆ ಯಾವತ್ತೂ ವಿಶೇಷ ಬಾಂಧವ್ಯವಿದೆ. ಆ ಸಂಬಂಧಕ್ಕೆ ಯಾವತ್ತೂ ಧಕ್ಕೆಯಾಗಲ್ಲ ಎಂದಿದ್ದಾರೆ. ಟ್ರಂಪ್ ಮಾತಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ನಾವೂ ಸ್ನೇಹ ಸಂಬಂಧಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.